ಬೀದರ್: ವಿದ್ಯುತ್ ತಗುಲಿ ಯುವಕ ಮೃತ್ಯು

Update: 2024-12-10 07:47 GMT

ಬೀದರ್: ಯುವಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.

ನಾರಾಯಣಪುರ ಗ್ರಾಮದ ಕಲ್ಲಪ್ಪ ಬಸವರಾಜ ಮೇತ್ರೆ (30) ವಿದ್ಯುತ್ ತಗುಲಿ ಮೃತಪಟ್ಟ ಯುವಕ.

ಮನೆಯಲ್ಲಿನ ನೀರಿನ ಮೋಟರ್ ಆನ್ ಮಾಡಲು ತೆರಳಿದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಘಟನೆ ಸಂಭವಿಸಿದೆ.

ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News