ಬೀದರ್ | ಜಿಲ್ಲಾ ವಿದ್ಯುನ್ಮಾನ ಮಾಧ್ಯಮ ಸಂಘದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಮರಕಲೆ ಆಯ್ಕೆ

Update: 2024-12-11 17:10 GMT

ಬೀದರ್ : ಜಿಲ್ಲಾ ವಿದ್ಯುನ್ಮಾನ ಮಾಧ್ಯಮ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಮರಕಲೆ ಅವರನ್ನು ಆಯ್ಕೆ ಮಾಡಲಾಗಿದೆ. ನಗರದಲ್ಲಿ ನಡೆದ ಸಂಘದ ಸದಸ್ಯರ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ರಾಜಕುಮಾರ್ ಸ್ವಾಮಿ, ಅಧ್ಯಕ್ಷರಾಗಿ ಮಲ್ಲಿಕಾರ್ಜುನ್, ಕಾರ್ಯಾಧ್ಯಕ್ಷರಾಗಿ ಶಿವಾನಂದ್, ಉಪಾಧ್ಯಕ್ಷರಾಗಿ ಸಂಜೀವಕುಮಾರ್ ಬುಕ್ಕಾ, ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ್ ನಾಯ್ಕ್, ಕಾರ್ಯದರ್ಶಿಗಳಾಗಿ ವಿಶ್ವ ವಡಗಾಂವ್ ಹಾಗೂ ಶರಣು ಸ್ವಾಮಿ ಅವರು ಆಯ್ಕೆಯಾದರು.

ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿರುವ ನಕಲಿ ವಾಹಿನಿ ಹಾಗೂ ಯುಟ್ಯೂಬರ್‌ಗಳ ಹಾವಳಿಗೆ ಕಡಿವಾಣ ಹಾಕಲು ಅಗತ್ಯವಿದ್ದು, ಜಿಲ್ಲಾಡಳಿತ ನಕಲಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ರಾಜಕುಮಾರ್ ಸ್ವಾಮಿ ಒತ್ತಾಯಿಸಿದರು.

ಪತ್ರಕರ್ತರಾದ ದುರ್ಗಪ್ಪ ಹೊಸಮನಿ, ಲಿಂಗೇಶ್ ಮರಕಲೆ, ನಂದುಕುಮಾರ್, ಅಂಬರೀಷ್ ಸ್ವಾಮಿ, ಮುಹಮ್ಮದ್ ಆಸೀಫ್, ಭರತ್ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News