ಬೀದರ್ | ಅದಾನಿಯನ್ನು ಬಂಧಿಸಲು ಸಿಪಿಐ ಒತ್ತಾಯ
ಬೀದರ್ : ಕೋಟ್ಯಂತರ ರೂ. ಅವ್ಯವಹಾರ ನಡೆಸಿದ ಭಾರತದ ಬಹುದೊಡ್ಡ ಉದ್ಯಮಿದಾರ ಅದಾನಿಯನ್ನು ಬಂಧಿಸಬೇಕೆಂದು ಭಾರತೀಯ ಕಮ್ಯುನಿಷ್ಟ ಪಕ್ಷ (CPI) ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ಅದಾನಿ ದೇಶದಲ್ಲಿಯೇ ಅತೀ ದೊಡ್ಡ ಬಂಡವಾಳಗರಾಗಿದ್ದಾರೆ. ಅದಾನಿ ಅವರದ್ದು ಸುಮಾರು 250 ಬಿಲಿಯನ್ ಡಾಲರ್ ಅವ್ಯವಹಾರ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಇವರ ಕಂಪನಿಗಳ ಷೇರು ಹಗರಣದ ಬಗ್ಗೆ ಹಿಂಡನಬರ್ಗ್ ವರದಿ ಬಂದಿದೆ. ಇವಾಗ ಅದಾನಿ ಅವರು ಸೋಲಾರ್ ಎನರ್ಜಿ ಕುರಿತು ಭಾರತದ ಅಧಿಕಾರಿಗಳಿಗೆ ಲಂಚ ಕೊಟ್ಟಿರುತ್ತಾರೆ ಎಂಬ ಆರೋಪವಿದೆ ಎಂದು ತಿಳಿಸಿದರು.
ಇತ್ತೀಚಿಗೆ ನ್ಯಾಯ ಮೂರ್ತಿ ಸಂತೋಷ ಹೆಗ್ಡೆಯವರ ವರದಿಯಲ್ಲಿ ಆದಾನಿ ಕಂಪನಿಯ ಬೆಳಕೇರಿ ಬಂದರಿನ ಹಗರಣ ಬಗ್ಗೆ ದಾಖಲೆ ಇದೆ. ಇಷ್ಟೆಲ್ಲ ಹಗರಣ ನಡೆಸಿದ ಅದಾನಿಯನ್ನು ಬಂಧಿಸಬೇಕೆಂದು ಮನವಿಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ AIKS ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನಾ, ಕಾರ್ಯದರ್ಶಿ ಎಂ.ಡಿ.ಅಲಿ ಅಹ್ಮದ್, ಎಂ.ಡಿ.ಶಾಫಾಯತ್ ಅಲಿ, ಅಖಿಲ್ ಭಾರತ್ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ಪ್ರಭು ಹುಚ್ಚಕನಳ್ಳಿ, ಎಂ.ಡಿ.ಖಮರ್ ಪಟೇಲ್, ಪ್ರಭು ತಗಣಿಕರ್, ಚಂದೋಬಾ ಭೋಸ್ಲೆ, ಶೇಕ್ ಯಾದುಲ್, ಸುರೇಶ ವಾಗನಕೇರಾ, ಜೈಶಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.