ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಒತ್ತಾಯ
ಬೀದರ್ : ಅಂಬೇಡ್ಕರ್ ಅವರನ್ನು ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಕಲ್ಯಾಣ ಕರ್ನಾಟಕ ವಿಭಾಗದಿಂದ ಮನವಿ ಪತ್ರ ಸಲ್ಲಿಸಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಮಿತ್ ಶಾ ಅವರು ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿಗಳ ಸಮ್ಮುಖದಲ್ಲಿ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದಾರೆ. ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಾಗಿತ್ತು. ಪ್ರಧಾನ ಮಂತ್ರಿಗಳು ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕಿತ್ತು. ಇವರ ಹೇಳಿಕೆಯನ್ನು ಖಂಡಿಸಿ ದೇಶದ ತುಂಬೆಲ್ಲ ಜನ ಹೋರಾಟ ಮಾಡುತಿದ್ದಾರೆ. ಆದರೂ ಸಹ ದೇಶದ ಜನತೆ ಮುಂದೆ ಗೃಹ ಸಚಿವರು ಕ್ಷೇಮೆಯು ಕೇಳುತ್ತಿಲ್ಲ, ರಾಜೀನಾಮೆಯು ಸಲ್ಲಿಸುತ್ತಿಲ್ಲ. ಹಾಗಾಗಿ ತಕ್ಷಣವೇ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ.ಸುಬ್ಬಣ್ಣ ಕರಕನಳ್ಳಿ, ಜಿಲ್ಲಾಧ್ಯಕ್ಷ ಅವಿನಾಶ್ ಶಾಹಗಂಜ್, ಕರ್ನಾಟಕ ಪ್ರಜಾಶಕ್ತಿ ಜಿಲ್ಲಾ ಕಾರ್ಯಧ್ಯಕ್ಷ ರಾಜಕೀಯ ಚೌಳಿ, ಕರ್ನಾಟಕ ಪ್ರಜಾಸಕ್ತಿ ವಿಭಾಗಿಯ ಅಧ್ಯಕ್ಷ ಪ್ರೇಮಕುಮಾರ್ ಕಾಂಬಳೆ, ನಗರ ಸಭೆ ಸದಸ್ಯ ಸೂರ್ಯಕಾಂತ್ ಸಾಧುರೆ, ಬಸವರಾಜ್ ಜಡಗೆ, ಅಂಬಾದಾಸ್ ಸೈನೆ, ಮಲ್ಲಿಕಾರ್ಜುನ ಕೌಠಾ ಹಾಗೂ ವಿಜಯಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.