ಬೀದರ್ | ಬಹುಜನ ಸಮಾಜ ಪಾರ್ಟಿಯ ಔರಾದ್ ತಾಲ್ಲೂಕು ಘಟಕ ರಚನೆ

Update: 2025-01-05 11:55 GMT

ಬೀದರ್ : ಬಹುಜನ ಸಮಾಜ ಪಾರ್ಟಿಯ ಔರಾದ್ ತಾಲೂಕು ಘಟಕ ರಚನೆ ಮಾಡಲಾಗಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕಪೀಲ್ ಗೋಡಬೋಲೆ ಅವರು ತಿಳಿಸಿದ್ದಾರೆ.

ಇತ್ತಿಚಿಗೆ ಎ.ಐ.ಬಿ.ಎಸ್.ಪಿ ಪಕ್ಷ ತೊರೆದ ಕೆ.ಮಲ್ಲಿಕಾರ್ಜುನ್ ಕೌಠಾ ಅವರನ್ನು ತಾಲೂಕು ಅಧ್ಯಕ್ಷ, ತುಕಾರಾಮ್ ಕಾಂಬ್ಳೆ ತಾಲೂಕು ಉಪಾಧ್ಯಕ್ಷ ಹಾಗೂ ಪ್ರಫುಲಕುಮಾರ್ ಸಿಂಧೆ ಅವರನ್ನು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಲೂಕಿನಲ್ಲಿ ಬಿಎಸ್ಪಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಲು ಶ್ರಮಪಡಬೇಕು ಎಂದು ತಾಲೂಕು ಪದಾಧಿಕಾರಿಗಳಿಗೆ ಹೇಳುವ ಮೂಲಕ ಪಕ್ಷದ ಸದಸ್ಯತ್ವ ನೊಂದಣಿ ಪುಸ್ತಕ ನೀಡಿದ್ದರು.

ಜ.15 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಾಯಾವತಿ ಅವರ ಹುಟ್ಟು ಹಬ್ಬವಿದೆ. ಅವರ ಹುಟ್ಟುಹಬ್ಬವನ್ನು ಆರ್ಥಿಕ ಸಹಯೋಗ ದಿವಸ್ ಎಂದು ಪ್ರತಿ ವರ್ಷವೂ ದೇಶದಾದ್ಯಂತ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಈ ವರ್ಷವು ಆಚರಣೆ ಮಾಡುತ್ತಿದ್ದೇವೆ. ಹಾಗಾಗಿ ಆರ್ಥಿಕ ಸಹಯೋಗ ದಿವಸ್ ಅಂಗವಾಗಿ ಪಕ್ಷ ಮುನ್ನಡೆಸಲು ದೇಶದ ಎಲ್ಲಾ ಸಮೂದಾಯದ ಬಡವರ ಬಳಿ ತೆರಳಿ ದೇಣಿಗೆ ಸಂಗ್ರಹ ಮಾಡುತ್ತೇವೆ. ಆದ್ದರಿಂದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ತಾಲೂಕಿನ ಬಹುಜನರ ಬಳಿ ತೆರಳಿ ಆರ್ಥಿಕ ಸಹಯೋಗ ಕೇಳಿ ಪಡೆಯಬೇಕು ಎಂದು ಆರ್ಥಿಕ ಸಹಯೋಗದ ಪುಸ್ತಕ ಕೂಡ ವಿತರಿಸಿದರು.

ಈ ಸಂಧರ್ಭದಲ್ಲಿ ಸೋಪಾನರಾವ್ ಡೋಂಗ್ರೆ, ಜಿಲ್ಲಾ ಸಂಯೋಜಕ ರಾಹುಲ್ ಖಂದಾರೆ ಹಾಗೂ ಜಿಲ್ಲಾ ಉಪಾಧ್ಯಕ್ಷ ಸಚಿನ್ ಗಿರಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News