ಬಿಜೆಪಿ ಹಗರಣ ಮುಚ್ಚಿಹಾಕಲು ಸಚಿನ್ ಪಾಂಚಾಳ ಪ್ರಕರಣ ಮುನ್ನೆಲೆಗೆ ತರಲಾಗಿದೆ : ಪ್ರದೀಪ್ ಜಂಜಿರೆ
ಬೀದರ್ : ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದ ಕೋವಿಡ್, ಅಕ್ರಮ ಗಣಿಗಾರಿಕೆ ಹಾಗೂ ವೈದ್ಯಕಿಯ ಇಲಾಖೆಯಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಲು ಸಚಿನ್ ಪಾಂಚಾಳ ಕೇಸನ್ನು ಮುನ್ನೆಲೆಗೆ ತರಲಾಗಿದೆ ಎಂದು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರದೀಪ್ ಜಂಜೀರೆ ಆರೋಪಿಸಿದ್ದರು.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅಧಿಕಾರದ ಅವಧಿಯಲ್ಲಿ 14.21 ಕೋಟಿ ರೂ. ಅಕ್ರಮ ನಡೆದಿರುವ ಬಗ್ಗೆ ಮೈಕಲ್ ಡಿ.ಖುನ್ನಾ ಸಮಿತಿ ವರದಿ ನೀಡಿದೆ. ವೈದ್ಯಕಿಯ ಶಿಕ್ಷಣ ಇಲಾಖೆ 125 ಕೋಟಿ ರೂ. ಅಕ್ರಮ ನಡೆದಿರುವ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಪ್ರಿಯಾಂಕ್ ಖರ್ಗೆ ಸದನದಲ್ಲಿ ಧ್ವನಿ ಎತ್ತಿದ್ದರಿಂದ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಹುನ್ನಾರ ನಡೆಸುತ್ತಿದ್ದೆ ಎಂದು ಆರೋಪಿಸಿದರು.
ಬಿಜೆಪಿಯವರು ಮಾಡಿದ್ದ ಹಗರಣಗಳು ಮುಚ್ಚಿಹಾಕುವ ಉದ್ದೇಶದಿಂದ ಹಾಗೆಯೇ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಹಗರಣಗಳು ಬಯಲಿಗೆಳೆಯುತಿದ್ದರಿಂದ ರಾಜಕೀಯ ದ್ವೇಷದಿಂದಾಗಿ ಬಿಜೆಪಿ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಹಿಂದ ಒಕ್ಕೂಟದ ಜಿಲ್ಲಾಧ್ಯಕ್ಷ ತುಕಾರಾಮ್ ಚಿಮಕೋಡೆ ಉಪಸ್ಥಿತರಿದ್ದರು.