ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸಮತೋಲನ ಸಾಧ್ಯ : ಪ್ರೊ.ಬಿ.ಎಸ್.ಬಿರಾದಾರ

Update: 2024-11-12 16:11 GMT

ಬೀದರ್ : ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೀದರ್ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಬಿ.ಎಸ್.ಬಿರಾದಾರ ತಿಳಿಸಿದ್ದಾರೆ.

ಬೀದರ್ ವಿಶ್ವವಿದ್ಯಾಲಯದ ವತಿಯಿಂದ 2024-25ನೇ ಸಾಲಿನ ಏಕವಲಯ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆ ಮತ್ತು ವಿಶ್ವವಿದ್ಯಾಲಯದ ತಂಡದ ಆಯ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಾಧ್ಯವಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು. ವಿಶ್ವವಿದ್ಯಾಲಯಗಳಲ್ಲಿ ಅನೇಕ ಅನಾನುಕೂಲತೆ ಇದ್ದರೂ ಸ್ಪರ್ಧೆಗಳು ಯಶಸ್ವಿಗೊಂಡಿವೆ. ಗುಡ್ಡಗಾಡು ಓಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿoಗ ಸಾವಳಗಿ ಮಾತನಾಡಿ, ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಶೈಕ್ಷಣಿಕವಾಗಿ ಬೆಳವಣಿಗೆ ಕಾಣಲು ಸಾಧ್ಯ. ದೇವರ ಮೇಲೆ ಭರವಸೆ ಇಟ್ಟು, ಪಾಲಕರ ಸಹಕಾರದಿಂದ, ಶಿಕ್ಷಕರ ಮೇಲೆ ಭಕ್ತಿಯಿಟ್ಟು ನಡೆದಾಗ ಮಾತ್ರ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದರು.

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಭಾಲ್ಕಿಯ ಸಿ.ಬಿ. ಪದವಿ ಕಾಲೇಜಿನ ಪ್ರತೀಕ್ಷಾ ಪಿ., ದ್ವಿತೀಯ ಸ್ಥಾನವನ್ನು ಮನ್ನಳ್ಳಿ ಸ.ಪ್ರ.ದ.ಕಾಲೇಜಿನ ರೂಪಾ, ತೃತೀಯ ಸ್ಥಾನವನ್ನು ನೌಬಾದ ಸ.ಪ್ರ.ದ.ಕಾಲೇಜಿನ ಸುಜಾತಾ ವಿ., ನಾಲ್ಕನೇ ಸ್ಥಾನವನ್ನು ಔರಾದ ಸ.ಪ್ರ.ದ.ಕಾಲೇಜಿನ ಪ್ರೀತಿ ಇ., ಐದನೇ ಸ್ಥಾನವನ್ನು ಹುಮನಾಬಾದ ಸ.ಪ್ರ.ದ.ಕಾಲೇಜಿನ ಮಹೇಶ್ವರಿ ಎಸ್ ಹಾಗೂ ಆರನೇ ಸ್ಥಾನವನ್ನು ಮನ್ನಳ್ಳಿ ಸ.ಪ್ರ.ದ.ಕಾಲೇಜಿನ ಶಿಲ್ಪಾರಾಣಿ ಪಡೆದುಕೊಂಡರು. ಪುರುಷ ವಿಭಾಗದ ಸಮಗ್ರ ಚಾಂಪಿಯನ್‌ಶಿಪ್‌ನಲ್ಲಿ ಸ.ಪ್ರ.ದ.ಕಾಲೇಜು ನೌಬಾದ ತಂಡ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಕರ್ನಾಟಕ ಪದವಿ ಕಾಲೇಜು ಹಾಗೂ ತೃತೀಯ ಸ್ಥಾನವನ್ನು ಸಿ.ಬಿ.ಪದವಿ ಕಾಲೇಜು ಭಾಲ್ಕಿ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಮನ್ನಳ್ಳಿ ಸ.ಪ್ರ.ದ.ಕಾಲೇಜು ಸಮಗ್ರ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ, ಔರಾದ ಸ.ಪ್ರ.ದ.ಕಾಲೇಜು ದ್ವಿತೀಯ ಸ್ಥಾನ, ಭಾಲ್ಕಿಯ ಸಿ.ಬಿ.ಪದವಿ ಕಾಲೇಜು ತೃತೀಯ ಸ್ಥಾನವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕಾಶಿನಾಥ ಗಾಂವಕರ್, ಡಾ.ರಾಮಚಂದ್ರ ಗಣಾಪುರ, ಓಂಕಾರ ಮಹಾಶೆಟ್ಟಿ, ಶಿವರಾಜ ಪಾಟೀಲ, ಸಂಜುಕುಮಾರ ಅಪ್ಪೆ, ಊರ್ವಶಿ ಕೊಡ್ಲಿ, ಡಾ. ಮಾದಯ್ಯ ಸ್ವಾಮಿ, ಮಂಜುನಾಥ, ಬಾಲಸುಬ್ರಹ್ಮಣ್ಯಂ ಚಾಲಕ್, ರವಿ ನಾಯಕ್, ಬಸವರಾಜ ಪಾಟೀಲ, ಸತೀಶ ಡೊಂಗ್ರಿ, ಪುನೀತ್, ರಾಮ್ ಜಾಧವ್ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News