ಬೀದರ್: ಅಮಿತ್ ಶಾ ವಿರುದ್ಧ ಭೀಮ್ ಆರ್ಮಿ ಏಕತಾ ಮಿಷನ್ ಪ್ರತಿಭಟನೆ

Update: 2024-12-21 09:27 GMT

ಬೀದರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಅವರ ಮೇಲೆ ದೇಶದ್ರೋಹದಡಿ ಪ್ರಕರಣ ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಭೀಮ್ ಆರ್ಮಿ ಏಕತಾ ಮಿಷನ್ ಸಂಘಟನೆ ಆಗ್ರಹ ಮಾಡಿದೆ.

ಭೀಮ್ ಆರ್ಮಿ ಏಕತಾ ಮಿಷನ್ ವತಿಯಿಂದ ಇಂದು ಭಾಲ್ಕಿ ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಮಿತ್ ಶಾ ವಿರುದ್ದ ಘೋಷಣೆ ಕೂಗುತ್ತಾ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಭೀಮ್ ಆರ್ಮಿ ಏಕತಾ ಮಿಷನ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸಂಸತ್ ನಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್ ರಿಗೆ ಅವಮಾನ ಆಗುವಂತೆ ಮಾತನಾಡಿದ್ದು, ತೀರಾ ನೋವುಂಟು ಮಾಡಿದೆ. ಹಾಗಾಗಿ ಪ್ರಧಾನ ಮಂತ್ರಿ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈ ಬಿಟ್ಟು, ಅವರ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಿಜೆಪಿಯು ಜನತೆಯ ಪಕ್ಷವಲ್ಲ. ಅದು ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಪಕ್ಷ. ಇದು ನಿರಂತರವಾಗಿ ಸಂವಿಧಾನದ ವಿರುದ್ಧ, ಮಹಾತ್ಮರ ವಿರುದ್ಧ ಅವಹೇಳನ ಹೇಳಿಕೆ ನೀಡುತ್ತದೆ. ಈ ಪಕ್ಷ ನಿರಂತರವಾಗಿ ಅಂಬೇಡ್ಕರ್ ಅವರ ತತ್ವ ಸಿದ್ದಾಂತದ ವಿರುದ್ಧವಾದ ಹೇಳಿಕೆ ನೀಡುತ್ತಾ, ಸಂವಿಧಾನ ಬದಲಾಯಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ತಾಲೂಕಾ ಅಧ್ಯಕ್ಷ ಸಿದ್ಧಾರ್ಥ ಪ್ಯಾಗೆ, ಉಪಾಧ್ಯಕ್ಷ ಧರ್ಮೇಂದ್ರ ಮೋಳಕೆರೆ, ಪ್ರವೀಣ್ ಮೊರೆ, ವಿಶಾಲ್ ಬಂಧು, ಅಶೋಕ್ ಗಾಯಕವಾಡ್, ಪ್ರಶಾಂತ್ ಕೊಟಗೇರಾ, ರತನ್ ಸೊನಾಳೆ, ಹರ್ಷಿತ್ ದಾಂಡೇಕರ್, ಸಚಿನ್ ಅಂಬೆಸಾಂಗವಿ, ಸುನೀಲ್ ವಾಂಜರೆ, ಧನರಾಜ್ ಕುಂದೆ,ಆದೇಶ್ ಭಾವಿಕಟ್ಟೆ, ತುಕಾರಾಮ್ ಕಾಸ್ಲೆ,ರಾಹುಲ್ ಪ್ಯಾಗೆ, ಲೋಕೇಶ್ ಕಾಂಬ್ಳೆ ಹಾಗೂ ಸಂದೀಪ್ ಮೋರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News