ಬೀದರ್ | ಬೈಕ್-ಇನ್ನೋವಾ ಕಾರು ಢಿಕ್ಕಿ; ಸವಾರ ಮೃತ್ಯು
Update: 2025-04-04 16:55 IST

ಸಾಂದರ್ಭಿಕ ಚಿತ್ರ
ಬೀದರ್ : ಬೈಕ್ ಮತ್ತು ಇನ್ನೋವಾ ಕಾರಿನ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಾಯಂಕಾಲ ಸುಮಾರು 5 ಗಂಟೆಗೆ ಮನ್ನಳ್ಳಿ ಹತ್ತಿರ ನಡೆದಿದೆ.
ಚಿಂತಲಗೇರಾ ಗ್ರಾಮದ ನಿವಾಸಿ ಪುಂಡಲೀಕ್ (52) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪುಂಡಲೀಕ್ ತನ್ನ ಹೆಂಡತಿಯ ಜೊತೆಗೆ ಬೈಕ್ ಮೇಲೆ ಚಿಂತಲಗೇರಾ ಗ್ರಾಮದಿಂದ ಮನ್ನಳ್ಳಿ ಕಡೆಗೆ ಬರುತ್ತಿದ್ದರು. ಆ ಸಮಯದಲ್ಲಿ ಬಂದ ಇನ್ನೋವಾ ಕಾರೊಂದು ಇವರ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಪುಂಡಲೀಕ್ ಸ್ಥಳದಲ್ಲೇ ಮೃತಪಟ್ಟಿದ್ದು, ಇವರ ಹೆಂಡತಿಯ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿದ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.