ಬೀದರ್ | ನೂತನ ಅನುಭವ ಮಂಟಪದ ಶಿಲ್ಪಿ ಡಾ.ಚನ್ನಬಸವ ಪಟ್ಟದೇವರು : ನವೀಲಕುಮಾರ್ ಉತ್ಕಾರ್

Update: 2024-12-22 11:38 GMT

ಬೀದರ್ : 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಅನುಭವ ಮಂಟಪವನ್ನು ನಿರ್ಮಿಸಿದರು. 21ನೇ ಶತಮಾನ ಆಧುನಿಕ ಯುಗದಲ್ಲಿ ಭಾಲ್ಕಿ ಹಿರೇಮಠದ ಲಿಂ.ಡಾ.ಚನ್ನಬಸವ ಪಟ್ಟದೇವರು ನೂತನ ಅನುಭವ ಮಂಟಪ ನಿರ್ಮಿಸಿದ ಶಿಲ್ಪಿ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.

ಔರಾದ್ ತಾಲ್ಲೂಕಿನ ಸಂತಪೂರದ ಸಿದ್ದರಾಮೇಶ್ವರ್ ಪದವಿಪೂರ್ವ ಕಾಲೇಜಿನಲ್ಲಿ ಶತಾಯುಷಿ ಡಾ.ಚನ್ನಬಸವ ಪಟ್ಟದೇವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಕ್ರಾಂತಿ, ಉಚಿತ ದಾಸೋಹ ಹಾಗೂ ಕರ್ನಾಟಕ ಏಕೀಕರಣ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಡಾ.ಚನ್ನಬಸವ ಪಟ್ಟದೇವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ವಿದ್ಯಾರ್ಥಿನಿ ಕೀರ್ತನಾ ಅನಿಲಕುಮಾರ್ ಮಾತನಾಡಿ, ದಲಿತರ ಉದ್ಧಾರವನ್ನು ಬಯಸಿ, ಮುಷ್ಟಿಯಷ್ಟು ಭಿಕ್ಷೆ ಬೇಡಿ ಬಡ ಜನರಿಗೆ ದಾಸೋಹ ವ್ಯವಸ್ಥೆಯನ್ನು ಮಾಡಿದವರು ಡಾ.ಚನ್ನಬಸವ ಪಟ್ಟದೇವರು ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸುಧೀರ್ ಆಲೂರೆ, ಶಿವಪುತ್ರ ಧರಣಿ, ರಾಜಕುಮಾರ್ ಹಳ್ಳಿಕರ್, ಅಂಕಿತಾ, ಜಿತೇಂದ್ರ ಡಿಗ್ಗಿ, ಸಂತೋಷ್ ಧೂಳಗಂಡೆ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗುನ್ನಳ್ಳಿಕರ್, ನಿರ್ಮಲಾ ಜಮಾದಾರ ಹಾಗೂ ಅಶ್ವಿನಿ ಹಿಂದೊಡ್ಡಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News