ಬೀದರ್ | ಕನ್ನಡ ಉಳಿಸಿ ಬೆಳೆಸಲು ಡಾ.ಚನ್ನಬಸವ ಪಟ್ಟದ್ದೇವರ ಕೊಡುಗೆ ಮಹತ್ವವಾದದ್ದು : ಸತೀಶ್ ಚಿಟಮೆ

Update: 2024-12-22 11:35 GMT

ಬೀದರ್ : ಕನ್ನಡ ಉಳಿಸಿ ಬೆಳೆಸಲು ಭಾಲ್ಕಿಯ ಡಾ. ಚನ್ನಬಸವ ಪಟ್ಟದ್ದೇವರ ಕೊಡುಗೆ ಮಹತ್ತರವಾದದ್ದು ಎಂದು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಚಿಟಮೆ ತಿಳಿಸಿದ್ದಾರೆ.

ಔರಾದ್ ತಾಲ್ಲೂಕಿನ ತೇಗಂಪೂರ್ ಗ್ರಾಮದ ರೇವಪ್ಪಯ್ಯ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಜಾಮರ ಆಳ್ವಿಕೆಯಲ್ಲಿ ದಬ್ಬಾಳಿಕೆಯ ನಡುವೆಯೂ ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಭಾಷೆ ಕಲಿಸುವುದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಜೀವಂತವಾಗಿರಿಸಿದ್ದಾರೆ. ಹನ್ನೇರಡನೆ ಶತಮಾನದ ಬಸವಾದಿ ಶರಣರ ತತ್ವಗಳನ್ನು ಅನುಸರಿಸಿಕೊಂಡು ಬಂದಿರುವ ಲಿಂ.ಡಾ.ಚನ್ನಬಸವ ಪಟ್ಟದ್ದೇವರು ಕನ್ನಡಿಗರ ಮನೆ ದೇವರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಯುವ ಮುಖಂಡ ಸಂಗಮೇಶ್ ಮೊಕ್ತೆದಾರ್, ಶಂಕ್ರಯ್ಯ ಸ್ವಾಮಿ, ಚನ್ನಪ್ಪ ಮಜಿಗೆ, ವೀರಶೆಟ್ಟಿ ಚಿಟಮೇ, ಲೋಕೇಶ್ ಮಜಿಗೆ, ಶಿವಕುಮಾರ್ ಚಿಟಮೆ, ಚಂದ್ರಕಾಂತ್ ಚಿಟಮೆ ಹಾಗೂ ಸುಮೀತ್ ದೇಶಮುಖ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News