ಬೀದರ್ | ಅಳಿವಿನಂಚಿನಲ್ಲಿದ್ದ ಕನ್ನಡ ಉಳಿಸಿದ್ದು ಡಾ.ಚನ್ನಬಸವ ಪಟ್ಟದ್ದೇವರು : ಪ್ರಭು ಚವ್ಹಾಣ್

Update: 2024-12-22 11:42 GMT

ಬೀದರ್ : ಡಾ.ಚನ್ನಬಸವ ಪಟ್ಟದ್ದೇವರು ನಮ್ಮ ಗಡಿ ಭಾಗದಲ್ಲಿ ಅಳಿವಿನಂಚಿನಲ್ಲಿದ್ದ ಕನ್ನಡ ಉಳಿಸಿ ಬೆಳೆಸಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದ್ದಾರೆ.

ಔರಾದ್ ಪಟ್ಟಣದ ಶಾಸಕರ ಕಚೇರಿಯಲ್ಲಿ ಪೂಜ್ಯ ಲಿಂ.ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತಿಯನ್ನು ಆಚರಿಸಲಾಯಿತು.

ಪ್ರಭು ಚವ್ಹಾಣ್ ಅವರು ಡಾ.ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಮಾತನಾಡಿದ ಅವರು, ನಿಜಾಮರ ಆಳ್ವಿಕೆಯ ಸಂದರ್ಭದಲ್ಲಿ ನಮ್ಮ ಭಾಗದಲ್ಲಿ ಉರ್ದು ಭಾಷೆಯ ಪ್ರಭಾವ ಹೆಚ್ಚಾಗಿ, ಕನ್ನಡ ಅಳಿವಿನಂಚಿನಲ್ಲಿತ್ತು. ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸುವ ಮೂಲಕ ನಾಡಿನಲ್ಲಿ ಕನ್ನಡದ ಉಳಿವಿಗೆ ಶ್ರಮಿಸಿದ್ದರು. ಈಗಲೂ ಭಾಲ್ಕಿ ಮಠ ಕನ್ನಡ ಮಠ ಎಂದೇ ಖ್ಯಾತಿಯಾಗಿದೆ ಎಂದು ಸ್ಮರಿಸಿದರು.

ಅವರ ಆಶಯದಂತೆಯೇ ಬಸವಕಲ್ಯಾಣದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ವಿನೂತನ ಅನುಭವ ಮಂಟಪ ನಿರ್ಮಾಣಗೊಳ್ಳುತ್ತಿದೆ. ಹಿಂದೆ ನಾನು ಸಚಿವನಾಗಿದ್ದಾಗ ನೂತನ ಅನುಭವ ಮಂಟಪದ ಭೂಮಿ ಪೂಜೆ ನೆರವೇರಿಸಿದ ಹೆಮ್ಮೆ ನನಗಿದೆ. ಮುಂದಿನ ದಿನಗಳಲ್ಲಿ ಅನುಭವ ಮಂಟಪ ಬೃಹತ್ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ್ ಅಲ್ಮಾಜೆ, ದಯಾನಂದ್ ಘೂಳೆ, ಸಂದೀಪ್ ಪಾಟೀಲ್, ರಮೇಶ್ ಗೌಡ, ಜಗದೀಶ್ ಪಾಟೀಲ್, ಎಂ.ಡಿ ಸಲಾವುದ್ದಿನ್, ಮಹೇಶ್ ಭಾಲ್ಕೆ, ಸಿದ್ರಾಮಪ್ಪ ನಿಡೋದೆ, ಕಿರಣ ಶೆಂಬೆಳ್ಳಿ ಹಾಗೂ ಬಾಬು ಎಕಲಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News