ಬೀದರ್ | ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಸೋಮಶೇಖರ್ ಚಿದ್ರಿಗೆ ಗೆಲುವು

Update: 2024-12-21 12:13 GMT

ಬೀದರ್ : ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ಸೋಮಶೇಖರ್ ಚಿದ್ರಿ ಅವರು ಅತ್ಯಂತ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.

ಕುತೂಹಲ ಮೂಡಿಸಿದ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಇಂದು ತೆರೆ ಬಿದ್ದಿದೆ. ಒಟ್ಟು 72 ಮತಗಳಲ್ಲಿ 70 ಮತಗಳು ಚಲಾವಣೆಯಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ್ ಚಿದ್ರಿ ಅವರು 68 ಮತಗಳು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಬ್ರುವಾನ್ 02 ಮತಗಳು ಗಳಿಸಿ ಪರಾಭಾವಗೊಂಡಿದ್ದಾರೆ.

ಜಿಲ್ಲಾ ಖಜಾಂಚಿ ಸ್ಥಾನಕ್ಕೆ ಭಿವಪ್ಪ 67 ಮತಗಳು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಇವರ ವಿರುದ್ಧ ಮನೋಹರ್ ಕಾಶಿ ಅವರು 03 ಮತಗಳು ಪಡೆಯುವ ಮೂಲಕ ಸೋಲನ್ನು ಅನುಭವಿಸಿದ್ದಾರೆ.

ರಾಜ್ಯ ಪರಿಷತ್ತ ಸದಸ್ಯ ಸ್ಥಾನಕ್ಕೆ ರಾಜಕುಮಾರ ಮಾಳಗೆ ಅವರು 66 ಮತಗಳು ಪಡೆಯುವ ಮೂಲಕ ಜಯಭೇರಿ ಗಳಿಸಿದರೆ, ಬಸವರಾಜ್ ಜಕ್ಕಾ ಅವರು 04 ಮತಗಳು ಪಡೆಯುವ ಮೂಲಕ ಸೋತಿದ್ದಾರೆ.

ರಾಜೇಂದ್ರಕುಮಾರ್ ಗಂದಗೆ ಅವರ ಬಣ ಚುನಾವಣಾ ಕಣದಿಂದ ದೂರ ಸರಿದು ಸೋಮಶೇಖರ್ ಚಿದ್ರಿ ಅವರ ಬಣಕ್ಕೆ ಬೆಂಬಲ ಸೂಚಿಸಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News