ಬೀದರ್ | ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಬಸ್ ನಿರ್ವಾಹಕ
Update: 2024-11-17 13:38 GMT
ಬೀದರ್ : ಜಿಲ್ಲೆಯ ಭಾಲ್ಕಿ ಡಿಪೋದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತುಹೋಗಿದ್ದ 3ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಬಸ್ ನಿರ್ವಾಹಕ ಮರಳಿಸಿ ಪ್ರಮಾಣಿಕತೆ ಮೆರೆದಿದ್ದಾರೆ.
ಭಾಲ್ಕಿ ನಿಲ್ದಾಣದಿಂದ ಪ್ರಯಾಣ ಬೆಳೆಸಿದ ಮಹಮ್ಮದ್ ಚಿನ್ನಾಭರಣವನ್ನು ಬಸ್‌ನಲ್ಲಿಯೇ ಮೆರೆತು ಹೋಗಿದ್ದರು. ಚಿನ್ನಾಭರಣ ನೆನಪಾದ ಬಳಿಕ ಗಾಬರಿಗೊಂಡು ಬಸ್ ನಿಲ್ದಾಣಕ್ಕೆ ವಾಪಾಸ್ಸಾಗಿದ್ದಾರೆ. ಬಸ್ ನಿರ್ವಾಹಕ ಪ್ರಕಾಶ ಹತ್ತಿರ ಚಿನ್ನಾಭರಣ ಸೇಪ್ ಆಗಿರುವ ವಿಷಯ ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಳಿಕ ಮಹಮ್ಮದ್ ಅವರಿಗೆ ಚಿನ್ನಾಭರಣವನ್ನು ಮರಳಿ ನೀಡುವುದರ ಮೂಲಕ ಬಸ್ ನಿರ್ವಾಹಕ ಪ್ರಕಾಶ ಪ್ರಮಾಣಿಕತೆ ಮೆರೆದಿದ್ದಾರೆ.