ಬೀದರ್ | ಹತ್ತು ರೂಪಾಯಿ ನೀಡದ್ದಕ್ಕೆ ವ್ಯಕ್ತಿಗೆ ಚೂರಿ ಇರಿತ

Update: 2024-12-25 15:48 GMT

ಸಾಂದರ್ಭಿಕ ಚಿತ್ರ 

ಬೀದರ್ : ಕೇವಲ ಹತ್ತು ರೂಪಾಯಿ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ಕೋಪಗೊಂಡ ಯುವಕನೊಬ್ಬ ವ್ಯಕ್ತಿ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಬಸವಕಲ್ಯಾಣ ತಾಲ್ಲೂಕಿನ ಮಂಗಳೂರ ಗ್ರಾಮದಲ್ಲಿ ನಡೆದಿದೆ.

ಮಂಗಳೂರ ಗ್ರಾಮದ ನಿವಾಸಿ ಮೈನೋದ್ದಿನ್ ಅಹಮದಸಾಬ್ ಫುಲಾರೆ (45) ಗಾಯಗೊಂಡ ವ್ಯಕ್ತಿ ಎಂದು ತಿಳಿದುಬಂದಿದೆ.

ಮಂಗಳವಾರ ಸಂಜೆ ಸುನೀಲ್ ಪಾಟೀಲ್ ಎನ್ನುವ ವ್ಯಕ್ತಿ ಮೈನೋದ್ದಿನ್ ಎಂಬಾತನಿಂದ 10 ರೂ. ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಕೋಪಗೊಂಡ ಸುನಿಲ್, ಮೈನೋದ್ದಿನ್ ಅವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ.

ಗಾಯಾಳು ವ್ಯಕ್ತಿಯನ್ನು ಮುಡಬಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News