ಬೀದರ್: ಪತ್ನಿಯನ್ನು ನಿಂದಿಸಿ ಹಲ್ಲೆ; ಪತಿಗೆ ಜೈಲು ಶಿಕ್ಷೆ

Update: 2024-11-14 03:27 GMT
ಸಾಂದರ್ಭಿಕ ಚಿತ್ರ  (freepik)

ಬೀದರ್: ಔರಾದ್‌ ತಾಲ್ಲೂಕಿನ ಬೇಲೂರ (ಎನ್‌) ಗ್ರಾಮದಲ್ಲಿ ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎರಡು ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಶಿವಾಜಿ ವಗ್ಗೆನೋರ್‌ ಶಿಕ್ಷೆಗೆ ಒಳಗಾದ ವ್ಯಕ್ತಿ. 2016ರ ಜನವರಿ 11ರಂದು ತನ್ನ ಪತ್ನಿ ಪೂಜಾಳೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ನಿಂದಿಸಿ ಬಡಿಗೆಯಿಂದ ಮನಬಂದಂತೆ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಇಲ್ಲಿನ ಸಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ಬೀದರ್‌ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಚಿನ್‌ ಕೌಶಿಕ್‌ ಆರ್‌.ಎನ್‌. ಅವರು ಅಪರಾಧಿ ಶಿವಾಜಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ ಕಲಂ 498 (ಎ) ಅಡಿ 2 ವರ್ಷ ಸಾದಾ ಕಾರಾಗೃಹ ಶಿಕ್ಷೆ, ₹3 ಸಾವಿರ ದಂಡ, ದಂಡ ನೀಡದಿದ್ದಲ್ಲಿ 2 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಬೇಕು. ಕಲಂ 324ರ ಅಡಿ 2 ವರ್ಷ ಸಾದಾ ಜೈಲು ಶಿಕ್ಷೆ, ₹3 ಸಾವಿರ ದಂಡ, ಕಲಂ 504ರ ಅಡಿ ಆರು ತಿಂಗಳು ಸಾದಾ ಜೈಲು ಶಿಕ್ಷೆ, ₹2 ಸಾವಿರ ದಂಡ, ಕಲಂ 506ರ ಅಡಿ ಆರು ತಿಂಗಳು ಸಾದಾ ಜೈಲು ಶಿಕ್ಷೆ, ₹2 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News