ಸಹಕಾರದ ಮೂಲಕ ಸರ್ವರ ಏಳಿಗೆ ಸಾಧಿಸಿದ ಗುರುಪಾದಪ್ಪ ನಾಗಮಾರಪಳ್ಳಿ: ವಿಶ್ವನಾಥ್ ಸಾವ್ಕಾರ್

Update: 2024-11-17 16:55 GMT

ಬೀದರ್ : ಹಣಕಾಸು ವ್ಯವಹಾರ ನಡೆಸುವ ಬ್ಯಾಂಕಿಗೆ ಹೊಸ ರೂಪ ನೀಡಿ, ಜನ ಸಾಮಾನ್ಯರ ಏಳಿಗೆಗೆ ಶ್ರಮಿಸುವಂತೆ ಮಾಡಿದವರು ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿಯವರು. ಸಹಕಾರ ಕ್ಷೇತ್ರದ ಮೂಲಕ ಅಭಿವೃದ್ಧಿ ಸಾಧಿಸಿದ, ಬಡವರನ್ನು ಆರ್ಥಿಕವಾಗಿ ಸಶಕ್ತಗೊಳಿಸಿದ ಧೀಮಂತ ನಾಯಕರು ಎಂದು ವಿಶ್ವನಾಥ್ ಸಾವ್ಕಾರ್ ಅವರು ಸ್ಮರಿಸಿದರು.

ಔರಾದ್ ತಾಲ್ಲೂಕಿನ ಚಿಂತಾಕಿ ಗ್ರಾಮದಲ್ಲಿ ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ 9ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆ ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದಿ.ನಾಗಮಾರಪಳ್ಳಿ ಅವರು ದಾಖಲೆ ಅವಧಿಯಲ್ಲಿ ನಾರಂಜಾ ಕಾರ್ಖಾನೆ ನಿರ್ಮಿಸಿದರು. ಅವರ ನಾಯಕತ್ವದಲ್ಲಿ ಡಿಸಿಸಿ ಬ್ಯಾಂಕು ದೇಶದ ಗಮನ ಸೆಳೆಯುವಂತೆ ಬೆಳೆದಿದೆ. ಸಹರ್ದಾ ತರಬೇತಿ ಸಂಸ್ಥೆ, ಶಾರದಾ ಆರ್,-ಸೆಟಿ ಸಂಸ್ಥೆಗಳು ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡುತ್ತಿವೆ. ಸಾವಿರಾರು ಯುವಕರು ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ ಎಂದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಉಮಾಕಾಂತ್ ನಾಗಮಾರಪಳ್ಳಿ ಮಾತನಾಡಿ, ಎಸ್ಎಚ್‌ಜಿ ಮೂಲಕ ಜಿಲ್ಲೆಯಲ್ಲಿ ಮೌನ ಕ್ರಾಂತಿ ಮಾಡಿದವರು ದಿ ನಾಗಮಾರಪಳ್ಳಿಯವರು ಎಂದು ಹೇಳಿದರು.

ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ, ಆಸ್ಪತ್ರೆ ಉಪಾಧ್ಯಕ್ಷ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ, ನಾರಂಜಾ ಕಾರ್ಖಾನೆ ಅಧ್ಯಕ್ಷ ಸಿದ್ರಾಮ್ ಡಿ.ಕೆ., ಆಸ್ಪತ್ರೆ ನಿರ್ದೇಶಕರಾದ ಆಕಾಶ್ ನಾಗಮಾರಪಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಗುರುನಾಥರೆಡ್ಡಿ, ಭೀಮರಾವ್ ಪಾಟೀಲ್ ಡಿಗ್ಗಿ, ಹಾವಶೆಟ್ಟಿ ಪಾಟೀಲ್, ವೀರಶೆಟ್ಟಿ ಪಟ್ನೆ, ಸಂಜು ಸಿದ್ದಾಪುರ್, ಮಾಧವರಾವ್ ಪಾಟೀಲ್, ಜಗನ್ನಾಥ್ ಪಾಟೀಲ್ ಸಾಂಗವಿ, ಸೋಮಶೇಖರ್ ಪಾಟೀಲ್, ಹಾವಗಿರಾವ್ ಬಿರಾದಾರ್, ಸಂಗಮೇಶ್ ಪಾಟೀಲ್ ಅಲಿಯಂ ಬುರೆ, ವಿಜಯಕುಮಾರ್ ಪಾಟೀಲ್, ಎನ್ಎಸ್ಎಸ್ಕೆ ನಿರ್ದೇಶಕ ಝರೆಪ್ಪ ಮಮದಾಪುರ್, ಶಿವಕುಮಾರ್ ಕನ್ನಾ, ಡಾ.ದೀಪಕ್ ಚೊಕ್ದೆ, ಡಾ.ಕಾರ್ತಿಕ್ ಪಾಟೀಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News