ಸದ್ಭಾವನಾ ಸೌಹಾರ್ದ ಸಮಾರಂಭ

Update: 2024-07-22 16:59 GMT

ಬೀದರ್: ಸದ್ಭಾವನಾ ಸೌಹಾರ್ದ ಸಮಾರಂಭ‌ವು ಬೀದರ್‌ ನಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಫ್.ಡಿ.ಸಿ.ಎ.ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ಮೂಹಮ್ಮದ್ ಸಲೀಮ್ ಇಂಜಿನಿಯರ್ ಮಾತನಾಡುತ್ತಾ, ಕರ್ನಾಟಕದ ಜನತೆಯ ಸದ್ಭಾವನೆ ಪರಸ್ಪರರ ಪ್ರೀತಿ, ಕೂಡಿ ಬಾಳುವ ಸಂಸ್ಕೃತಿ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದೆ. ಧರ್ಮ, ಭಾಷೆ, ಆಚಾರ-ವಿಚಾರದಲ್ಲಿ ಭಿನ್ನತೆ ಇದ್ದರೂ ತಮ್ಮಲ್ಲಿ ಏಕತೆ ಇದೆ, ಇದು ನನ್ನ ಮೇಲೆ ಭಾವನಾತ್ಮಕವಾಗಿ ಗಾಢ ಪರಿಣಾಮ ಬೀರಿದೆ ಎಂದರು.

ಇಂದಿನ ಸಮಾರಂಭ ತಮ್ಮ ಏಕತೆಯ ಪ್ರಾಯೋಗಿಕ ಉದಾರಹಣೆ ಎಂದು ಕನ್ನಡಿಗರನ್ನು ಹೊಗಳಿ ಕೊಂಡಾಡಿದರು. ಇದೇ ಧರ್ಮದ ಸಂದೇಶ ಎಂದರು. ವೈವಿದ್ಯತೆ ನಮ್ಮ ನೆಚ್ಚಿನ ದೇಶದ ವೈಶಿಷ್ಟ್ಯತೆ ಆಗಿದೆ. ಅದನ್ನು ಕಾಪಾಡುವುದು, ಸಂರಕ್ಷಿಸುವುದು, ಬೆಳೆಸುವುದು ಮತ್ತು ಆಚರಿಸುವುದು ಅವಶ್ಯಕವಾಗಿದೆ ಎಂದರು.

ಶ್ರೀ ಚನ್ನಬಸವೇಶ್ವರ ಜ್ಞಾನಪೀಠ ಬಸವಗಂಗೋತ್ರಿ ಕುಂಬಳಗೋಳ ಬೆಂಗಳೂರು ಇದರ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಸಂಚಾಲಕರು ಅನುಭವ ಮಂಟಪ ಬಸವಕಲ್ಯಾಣ, ಬ್ರಹ್ಮಕುಮಾರ ಶಿಲ್ಪಾ ದೀದಿ ಹಾಗೂ ಮೌಲಾನಾ ಮೊನಿಸ ಕಿರ್ಮಾನಿ, ಶ್ರೀ ಗ್ಯಾನಿ ದರ್ಬಾರಾಸಿಂಗ್ ಹಾಗೂ ವಿಮಲಾ ಚಾಲಕ್ ತಮ್ಮ ಅಮೂಲ್ಯ ವಿಚಾರಗಳನ್ನು ವ್ಯಕ್ತಪಡಿಸಿದರು. ಬಸವ ಮಹಾಮನೆಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹಾಗೂ ಜಮಾತೆ ಇಸ್ಲಾಮಿ ಹಿಂದ್‍ನ ಬೀದರ ಸಂಚಾಲಕರಾದ ಇಕ್ಬಾಲ್ ಗಾಜಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಮಾರಂಭವು ಸೈಯದ್ ಅತಿಕುಲ್ಲಾ ಇಂಜಿನೀಯರ್ ಅವರ ದೇವವಾಣಿ ಪಠಣದಿಂದ ಪ್ರಾರಂಭಿಸಲಾಯಿತು, ಮಹಮ್ಮದ ಮೋಅಜ್ಜಮ್ ಅಧ್ಯಕ್ಷರು, ಜಮಾತೆ ಇಸ್ಲಾಮಿ ಹಿಂದ್ ಅತಿಥಿಗಳ ಸ್ವಾಗತ ಕೋರಿದರು. ಗುರುನಾಥ ಗಡ್ಡೆ ಸಂಚಾಕರು ಸದ್ಭಾವನಾ ಮಂಚ್ ಬೀದರ ವಂದನಾರ್ಪಣೆ ಮಾಡಿದರು, ಮುಹಮ್ಮದ್ ನಿಝಾಮುದ್ದೀನ್ ಸಮಾರಂಭದ ಸಂಚಾಲನೆ ಮಾಡಿದರು, ಸಮಾರಂಭದಲ್ಲಿ ಬೀದರ ನಗರದ ವಿವಿಧ ಗಣ್ಯರು ಉಪಸ್ಥಿತರಿದ್ದರು.












 


 


 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News