ಬೀದರ್: ಹೆತ್ತವರ ಜೊತೆಗೂಡಿ ಗಂಡನ ಕೊಲೆ ಮಾಡಿದ ಪತ್ನಿ
Update: 2025-02-26 20:59 IST

ಶ್ರೀಧರ್
ಬೀದರ್ : ತಂದೆ ತಾಯಿ ಜೊತೆಗೂಡಿ ಪತ್ನಿಯು ತನ್ನ ಪತಿಯ ಹತ್ಯೆ ಮಾಡಿದ ಘಟನೆ ಔರಾದ್ ತಾಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶ್ರೀಧರ್ (28) ಮೃತ ವ್ಯಕ್ತಿ.
ಶ್ರೀಧರ್ ಪ್ರತಿದಿನ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಹೆಂಡತಿಯು ತನ್ನ ತಂದೆ ಹಾಗೂ ತಾಯಿಯ ಜೊತೆಗೂಡಿ ಪತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.