ಆಸೀಸ್‌ ಬೌಲರ್‌ಗಳ ಪಾರಮ್ಯ, 240ಕ್ಕೆ ಆಲೌಟ್‌ ಆದ ಭಾರತ

Update: 2023-11-19 12:29 GMT
Photo : cricketworldcup.com

ಅಹಮದಾಬಾದ್‌ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 240 ರನ್ ಗಳಿಗೆ ಆಲೌಟ್ ಆಯಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಬಂದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ 10 ಓವರ್ಗಳಲ್ಲಿ ಓವರ್ಗೆ 8 ರನ್ ಗಳ ಸರಾಸರಿಯಲ್ಲಿ ರನ್ ಗಳಿಸಿದ ಭಾರತ ತಂಡ, ಶುಭಮನ್ ಗಿಲ್ 4 ರನ್ ಗೆ ಔಟ್ ಆಗುವುದರೊಂದಿಗೆ ಆಘಾತ ಅನುಭವಿಸಿತು.

31 ಎಸೆತಗಳಲ್ಲಿ 47 ರನ್ ಗಳಿಸಿದ ರೋಹಿತ್ ಶರ್ಮಾ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿದರೂ, ಅದು ಹೆಚ್ಚು ಸಮಯ ಉಳಿಯಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಓವರ್ನಲ್ಲಿ ಟ್ರಾವಿಸ್ ಹೆಡ್ ಪಡೆದ ಅದ್ಭುತ ಕ್ಯಾಚ್ ರೋಹಿತ್ ಶರ್ಮಾಗೆ ಪೆವಿಲಿಯನ್ ದಾರಿ ತೋರಿಸಿತು. ರೋಹಿತ್ ಶರ್ಮಾ ವಿಕೆಟ್ ಉರುಳಿದಾಗ ಗ್ಲೆನ್ ಮ್ಯಾಕ್ಸ್ವೆಲ್ ಸಂಭ್ರಮಿಸಿದರು.

ಬಳಿಕ ಜೊತೆಯಾ ವಿರಾಟ್ – ರಾಹುಲ್ ಜೋಡಿ ಭಾರತಕ್ಕೆರಕ್ಷಣಾತ್ಮಕ ಆಟವಾಡಿದರು. ವಿರಾಟ್ ಕೊಹ್ಲಿ 4 ಬೌಂಡರಿ ಸಹಿತ 54 ರನ್ ಗಳಿಸಿದರು. ಅರ್ಧ ಶತಕ ಗಳಿಸುತ್ತಲೇ ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಕೆ ಎಲ್ ರಾಹುಲ್ ತಮ್ಮ ಕೋಚ್ ರಾಹುಲ್ ದ್ರಾವಿಡ್ ರಂತೆ ಕ್ರೀಸ್ಗೆ ಅಂಟಿಕೊಂಡು ಭಾರತದ ಮತ್ತೊಂದು ಗೋಡೆಯಾದರು.

107 ಎಸೆತ ಎದುರಿಸಿದ ರಾಹುಲ್ ಕೇವಲ ಒಂದು ಬೌಂಡರಿಯೊಂದಿಗೆ 66 ರನ್ ಗಳಿಸಿದ್ದಾಗ ಮಿಷೆಲ್ ಸ್ಟಾರ್ಕ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಭರವಸೆಯಿಟ್ಟಿದ್ದ ಸೂರ್ಯ ಕುಮಾರ್ ಯಾದವ್ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಅವರು ಕೇವಲ 18 ರನ್ ಗಳಿಸಿದರು. ರವೀಂದ್ರ ಜಡೇಜಾ 9, ಮುಹಮ್ಮದ್ ಶಮಿ 6, ಬೂಮ್ರಾ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕುಲ್‌ ದೀಪ್‌ ಯಾದವ್ 10, ಮುಹಮ್ಮದ್ ಸಿರಾಜ್ 9 ರನ್ ಗಳಿಸಿದರು.

ಬೌಲಿಂಗ್ ಪಿಚ್‌ನಲ್ಲಿ ಪಾರಮ್ಯ ಮೆರೆದ ಆಸ್ಟ್ರೇಲಿಯಾ ಬೌಲರ್ಗಳು ಭಾರತದ ಬ್ಯಾಟರ್‌ಗಳನ್ನು ನಿಯಂತ್ರಿಸಿದರು. ಮಿಷೆಲ್‌ ಸ್ಟಾರ್ಕ್‌ 3 ರನ್‌, ಜೋಸ್‌ ಹೇಝಲ್‌ವುಡ್‌, ಪ್ಯಾಟ್‌ ಕಮ್ಮಿನ್ಸ್‌ ತಲಾ 2, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಝಂಪಾ ತಲಾ 1 ವಿಕೆಟ್‌ ಪಡೆದರು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News