IPL LIVE | ಸನ್ ರೈಸರ್ಸ್ ಸೋಲಿಸಿ ಮೂರನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್
ಭುವನೇಶ್ವರ್ ಕುಮಾರ್ ಎಸೆದ ಮೊದಲನೇ ಓವರ್ ಮುಕ್ತಾಯ. ಐದು ರನ್ ಗಳಿಸಿದ ಕೆಕೆಆರ್ 5/0
ಬ್ಯಾಟಿಂಗ್ ಆರಂಭಿಸಿದ ಕೆಕೆಆರ್. ರಹ್ಮತುಲ್ಲಾ ಗುರ್ಬಾಝ್, ಸುನಿಲ್ ನರೇನ್ ಬ್ಯಾಟಿಂಗ್. ಹೈದರಾಬಾದ್ ಪರವಾಗಿ ಭುವನೇಶ್ವರ್ ಕುಮಾರ್ ಬೌಲಿಂಗ್.
18.3 ಓವರ್ ಗೆ ಆಲೌಟ್ ಆದ ಹೈದರಾಬಾದ್. ಆಂಡ್ರೂ ರೆಸೆಲ್ಸ್ ಓವರ್ ನಲ್ಲಿ ಮಿಷೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದ ಪ್ಯಾಟ್ ಕಮಿನ್ಸ್. ಹೈದರಾಬಾದ್ 113
18ನೇ ಓವರ್ ಎಸೆದ ಸುನಿಲ್ ನರೇನ್. 16 ಎಸೆತದಲ್ಲಿ 24 ರನ್ ಗಳಿಸಿದ ಪ್ಯಾಟ್ ಕಮಿನ್ಸ್. ಜಯದೇವ್ ಉನಾದ್ಕಟ್ ಎಲ್ ಬಿ ಡಬ್ಲ್ಯೂಗೆ ಡಿಆರ್ ಎಸ್ ಸಲ್ಲಿಸಿ ಯಶಸ್ವಿಯಾದ ಕೆಕೆಆರ್. 4 ರನ್ ಗಳಿಸಿ ನರೇನ್ ಗೆ ವಿಕೆಟ್ ಒಪ್ಪಿಸಿದ ಉನಾದ್ಕಟ್. ಕ್ರೀಸ್ ಗೆ ಬಂದ ಭುವನೇಶ್ವರ್ ಕುಮಾರ್. ಹೈದರಾಬಾದ್ 113ಕ್ಕೆ 9
17 ನೇ ಓವರ್ ಎಸೆದ ಹರ್ಷಿತ್ ರಾಣಾ. ಸಿಕ್ಸರ್ ಬಾರಿಸಿದ ಪ್ಯಾಟ್ ಕಮಿನ್ಸ್. ಆಂಡ್ರೂ ರಸೆಲ್ ಕ್ಯಾಚ್ ಹಿಡಿಯಲು ವಿಫಲ ಪ್ರಯತ್ನ. 10 ರನ್ ಗಳಿಸಿದ ಹೈದರಾಬಾದ್ 108/8
16 ನೇ ಓವರ್ ಎಸೆದ ಸುನಿಲ್ ನರೇನ್. ಪ್ಯಾಟ್ ಕಮಿನ್ಸ್ ಕ್ಯಾಚ್ ಕೈಬಿಟ್ಟ ಮಿಷೆಲ್ ಸ್ಟಾರ್ಕ್. ಹೈದರಾಬಾದ್ ಗೆ ಜೀವದಾನ. 8 ರನ್ ಗಳಿಸಿದ ಹೈದರಾಬಾದ್ 98/8
15 ನೇ ಓವರ್ ಎಸೆದ ಹರ್ಷಿತ್ ರಾಣಾ, ಕ್ಲಾಸೆನ್ ಅವರನ್ನು ಬೌಲ್ಡ್ ಮಾಡುವ ಮೂಲಕ, ಹೈದರಾಬಾದ್ ಗೆ ದೊಡ್ಡ ಆಘಾತ ನೀಡಿದ್ದಾರೆ. ಜಯದೇವ್ ಉನಾದ್ಕಟ್ ಕ್ರೀಸ್ ಗೆ ಬಂದರು. ಮೇಡನ್ ಓವರ್ ಎಸೆದ ಹರ್ಷಿತ್ ಒಂದು ವಿಕೆಟ್ ಪಡೆದರು. ಹೈದರಾಬಾದ್ 90/8
14ನೇ ಓವರ್ ಎಸೆದ ವರುಣ್ ಚಕ್ರವರ್ತಿ. ಹೈದರಾಬಾದ್ 90/7
13 ನೇ ಓವರ್ ಎಸೆದ ಆಂಡ್ರೂ ರೆಸೆಲ್. ವಿಕೆಟ್ ಕೀಪರ್ ರಹ್ಮಾನುಲ್ಲಾ ಗುರ್ಬಾಝ್ ಗೆ ವಿಕೆಟ್ ಒಪ್ಪಿಸಿದ ಅಬ್ದುಲ್ ಸಮದ್. ಬ್ಯಾಟಿಂಗ್ ಗೆ ಬಂದ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್. ಒಂದು ಬೌಂಡರಿ ಸಹಿತ 10 ರನ್ ಗಳಿಕೆ. ಹೈದರಾಬಾದ್ 82/7
12 ಓವರ್ ಮುಕ್ತಾಯಕ್ಕೆ ಶಹಬಾಝ್ ಅಹ್ಮದ್ ವಿಕೆಟ್ ಕಳೆದುಕೊಂಡ ಹೈದರಾಬಾದ್. ವಿಕೆಟ್ ಪಡೆದ ವರುಣ್ ಚಕ್ರವರ್ತಿ. ಕ್ರೀಸ್ ಗೆ ಬಂದ ಅಬ್ದುಲ್ ಸಮದ್. ಹೈದರಾಬಾದ್ 72/6