2,000 ರೂ. ನೋಟು ವಿನಿಮಯಕ್ಕೆ ಕಾಲಾವಕಾಶ ವಿಸ್ತರಿಸಿದ ಆರ್‌ಬಿಐ
ಬ್ಯಾಂಕುಗಳಲ್ಲಿ 2,000 ರೂ. ನೋಟು ವಿನಿಮಯಕ್ಕೆ ಅ.7ರ ವರೆಗೆ ಕಾಲಾವಕಾಶ ವಿಸ್ತರಣೆ
Update: 2023-09-30 11:39 GMT
ಮುಂಬೈ : ಬ್ಯಾಂಕುಗಳಲ್ಲಿ 2,000 ರೂ. ನೋಟು ವಿನಿಮಯಕ್ಕೆ ಅ.7ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.
ಈ ಹಿಂದಿನ ಆದೇಶದಲ್ಲಿ ಇವತ್ತು ಸೆ.30 ರವರೆಗೆ ಅವಕಾಶ ನೀಡಿತ್ತು. 2016ರ ನಗದು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕ ಭಾರತದಲ್ಲಿ 2000 ರೂ. ಗಳ ನೋಟು ಚಾಲನೆಗೆ ಬಂದಿತ್ತು.