ತೆರಿಗೆ ಹಂಚಿಕೆ: ಉತ್ತರ ಪ್ರದೇಶಕ್ಕೆ 31,000 ಕೋಟಿ ರೂ., ಕರ್ನಾಟಕಕ್ಕೆ 6310 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ ಸರಕಾರ
ಹೊಸದಿಲ್ಲಿ: ತೆರಿಗೆ ವಿಕೇಂದ್ರೀಕರಣದ ಭಾಗವಾಗಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ರೂ. 1,73,030 ಕೋಟಿಗಳನ್ನು ಬಿಡುಗಡೆ ಮಾಡಿದೆ.
ರಾಜ್ಯಗಳಲ್ಲಿ, ಉತ್ತರ ಪ್ರದೇಶವು ಅತಿ ಹೆಚ್ಚು ತೆರಿಗೆ ಹಂಚಿಕೆಯನ್ನು ಪಡೆದಿದ್ದು, ನಂತರದ ಸ್ಥಾನದಲ್ಲಿ ಬಿಹಾರ ಇದೆ. ಕರ್ನಾಟಕಕ್ಕೆ 6310.40 ಕೋಟಿ ರೂ.ಗಳನ್ನು ತೆರಿಗೆ ಪಾಲಾಗಿ ವಿತರಿಸಿದೆ.
ಪಶ್ಚಿಮ ಬಂಗಾಳವು ರೂ. 13,017.06 ಕೋಟಿಗಳನ್ನು ಪಡೆದಿದ್ದು, ಮಹಾರಾಷ್ಟ್ರ ಮತ್ತು ರಾಜಸ್ಥಾನಕ್ಕೆ ಕ್ರಮವಾಗಿ ರೂ. 10,930.31 ಕೋಟಿ ಮತ್ತು ರೂ. 10,426.78 ಕೋಟಿ ಹಂಚಿಕೆಯಾಗಿದೆ. ಗೋವಾ ಮತ್ತು ಸಿಕ್ಕಿಂನಂತಹ ಸಣ್ಣ ರಾಜ್ಯಗಳು ರೂ. 667.91 ಕೋಟಿ ಮತ್ತು ರೂ. 671.35 ಕೋಟಿಗಳನ್ನು ಪಡೆದಿವೆ.
ಡಿಸೆಂಬರ್ 2024 ರಲ್ಲಿ 89,086 ಕೋಟಿ ರೂ.ಗಳನ್ನು ರಾಜ್ಯಗಳಿಗೆ ವಿತರಿಸಲಾಗಿತ್ತು.
ರಾಜ್ಯವಾರು ವಿವರ:
ಉತ್ತರ ಪ್ರದೇಶ: 31,039.84 ಕೋಟಿ ರೂ.
ಆಂಧ್ರ ಪ್ರದೇಶ: 7002.52 ಕೋಟಿ ರೂ.
ಅರುಣಾಚಲ ಪ್ರದೇಶ: 3040.14 ಕೋಟಿ ರೂ.
ಅಸ್ಸಾಂ: 5412.38 ಕೋಟಿ ರೂ.
ಬಿಹಾರ- 17403.36 ಕೋಟಿ ರೂ.
ಛತ್ತೀಸ್‌ಗಢ- 5895.13 ಕೋಟಿ ರೂ.
ಗೋವಾ - 667.91 ಕೋಟಿ ರೂ.
ಗುಜರಾತ್ - 6017.99 ಕೋಟಿ ರೂ.
ಹರ್ಯಾಣ- 1891.22 ಕೋಟಿ ರೂ.
ಹಿಮಾಚಲ ಪ್ರದೇಶ- 1436.16 ಕೋಟಿ ರೂ.
ಜಾರ್ಖಂಡ್- 5722.10 ಕೋಟಿ ರೂ.
ಕರ್ನಾಟಕ- 6310.40 ಕೋಟಿ ರೂ.
ಕೇರಳ- 3330.83 ಕೋಟಿ ರೂ.
ಮಧ್ಯಪ್ರದೇಶ- 13582.86 ಕೋಟಿ ರೂ.
ಮಹಾರಾಷ್ಟ್ರ- 10930.31 ಕೋಟಿ ರೂ.
ಮಣಿಪುರ- 1238.90 ಕೋಟಿ ರೂ.
ಮೇಘಾಲಯ- 1327.13 ಕೋಟಿ ರೂ.
ಮಿಜೋರಾಂ- 865.15 ಕೋಟಿ ರೂ.
ನಾಗಾಲ್ಯಾಂಡ್- 984.54 ಕೋಟಿ ರೂ.
ಒಡಿಶಾ- 7834.80 ಕೋಟಿ ರೂ.
ಪಂಜಾಬ್- 3126.65 ಕೋಟಿ ರೂ.
ರಾಜಸ್ಥಾನ- 10426.78 ಕೋಟಿ ರೂ.
ಸಿಕ್ಕಿಂ- 671.35 ಕೋಟಿ ರೂ.
ತಮಿಳುನಾಡು- 7057.89 ಕೋಟಿ ರೂ.
ತೆಲಂಗಾಣ- 3637.09 ಕೋಟಿ ರೂ.
ತ್ರಿಪುರಾ - 1225.04 ಕೋಟಿ ರೂ.
ಉತ್ತರಾಖಂಡ- 1934.47 ಕೋಟಿ ರೂ.
ಪಶ್ಚಿಮ ಬಂಗಾಳ- 13017.06 ಕೋಟಿ ರೂ.