ವಿಪಕ್ಷಗಳ ಜೊತೆ ಮಾತುಕತೆ | ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಮುಂದುವರಿಕೆ?
Update: 2024-06-25 06:10 GMT
ಹೊಸದಿಲ್ಲಿ : ಎನ್ ಡಿ ಎ ಸರಕಾರದ ಮೂರನೇ ಅವಧಿಗೆ ಲೋಕಸಭೆಯ ಹಿಂದಿನ ಸ್ಪೀಕರ್ ಓಂ ಬಿರ್ಲಾ ಅವರನ್ನೇ ಮುಂದುವರೆಸಲು ಬಿಜೆಪಿ ಆಸಕ್ತಿ ಹೊಂದಿದ್ದು, ಈ ಬಗ್ಗೆ ಒಮ್ಮತ ಮೂಡಲು ವಿರೋಧ ಪಕ್ಷಗಳ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ.
ಆಡಳಿತರೂಢ ಎನ್ ಡಿ ಎ ಸರಕಾರದದ ಪರವಾಗಿ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪ್ರತಿಯಾಗಿ ಇಂಡಿಯಾ ಒಕ್ಕೂಟವು ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಬೇಡಿಕೆಯಿಟ್ಟಿದೆ ಎಂದು ಮೂಲಗಳು ತಿಳಿಸಿವೆ.