ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ: ಕಾಂಗ್ರೆಸ್, ಬಿಜೆಪಿ ಕಚೇರಿ ಧ್ವಂಸ

Update: 2024-11-18 05:22 GMT

Photo credit: PTI

ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಮುಂದುವರೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಚೇರಿಗಳನ್ನು ಗುಂಪೊಂದು ಜಿರಿಬಾಮ್ ಜಿಲ್ಲೆಯಲ್ಲಿ ಧ್ವಂಸ ಮಾಡಿದೆ.

ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎನ್ಪಿಪಿ ರವಿವಾರ ಹಿಂತೆಗೆದುಕೊಂಡಿದೆ. ಇಂಫಾಲ್ ಕಣಿವೆಯಲ್ಲಿ ಬಿಜೆಪಿ ಶಾಸಕರೊಬ್ಬರ ಪೂರ್ವಜರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಜಿರಿಬಾಮ್‌ ನ ಪಕ್ಷೇತರ ಶಾಸಕ ಅಶಬ್ ಉದ್ದೀನ್ ಒಡೆತನದ ಕಟ್ಟಡವನ್ನು ಕೂಡ ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಿರ್ದಿಷ್ಠಾವಧಿ ಕರ್ಫ್ಯೂ ವಿಧಿಸಲಾಗಿರುವ ಇಂಫಾಲ್ ಕಣಿವೆಯಲ್ಲಿ ಜನರ ಗುಂಪೊಂದು ಬಿಜೆಪಿಯ ಮೂವರು ಶಾಸಕರ ಮನೆಗಳಿಗೆ ರವಿವಾರ ಬೆಂಕಿ ಹಚ್ಚಿತ್ತು. ಕಾಂಗ್ರೆಸ್‌ ನ ಶಾಸಕರೊಬ್ಬರ ಮನೆಗೂ ಬೆಂಕಿ ಹಚ್ಚಲಾಗಿತ್ತು. ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪೂರ್ವಜರ ಮನೆಗೆ ಪ್ರತಿಭಟನಕಾರರ ಗುಂಪು ನುಗ್ಗಲು ಯತ್ನಿಸಿದಾಗ ಭದ್ರತಾ ಪಡೆಗಳು ಈ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಏಳು ಶಾಸಕರನ್ನು ಹೊಂದಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ(NPP) ರವಿವಾರ ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಎನ್ ಬಿರೇನ್ ಸಿಂಗ್ ಸರಕಾರವು ಮಣಿಪುರದಲ್ಲಿ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಶಾಂತಿ ಪುನಃಸ್ಥಾಪಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿತ್ತು.

ಆದರೆ, ಎನ್‌ ಪಿಪಿ ಪಕ್ಷವು ಬೆಂಬಲ ಹಿಂತೆಗೆದುಕೊಳ್ಳುವುದರಿಂದ ಬಿಜೆಪಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಏಕೆಂದರೆ ಬಿಜೆಪಿ ಪಕ್ಷವು 32 ಶಾಸಕರೊಂದಿಗೆ ಮಣಿಪುರ ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿದೆ. ಇದಲ್ಲದೆ ಬಿಜೆಪಿಗೆ, ನಾಗಾ ಪೀಪಲ್ಸ್ ಫ್ರಂಟ್(ಎನ್‌ಪಿಎಫ್)ನ ಐವರು ಶಾಸಕರು ಮತ್ತು ಜೆಡಿಯು ಪಕ್ಷದ 6 ಮಂದಿ ಶಾಸಕರ ಬೆಂಬಲವಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News