ಚಿಕ್ಕಮಗಳೂರು: ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
Update: 2024-12-26 02:35 GMT
ಚಿಕ್ಕಮಗಳೂರು: ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ತರೀಕೆರೆ ತಾಲ್ಲೂಕಿನ ಲಿಂಗದಳ್ಳಿಯ ಉಡವಾ ಗ್ರಾಮದಲ್ಲಿ ನಡೆದಿದೆ. ಇದೀಗ ತರೀಕೆರೆ ತಾಲ್ಲೂಕಿನಲ್ಲಿ ಎರಡು ಕಾಡಾನೆಗಳು ಮೃತಪಟ್ಟಂತಾಗಿದೆ.
ಆಹಾರ ಆರಿಸಿ ಬಂದ ಕಾಡಾನೆಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿರಬಹುದು ಎನ್ನಲಾಗುತ್ತಿದ್ದು, ವಿದ್ಯುತ್ ಆಘಾತಕ್ಕೊಳಗಾದ ಆನೆ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವೇ ಇರಲಿಲ್ಲ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ ಕಾಡಾನೆಗಳ ಸಂಘರ್ಷ ತೀವ್ರಗೊಂಡಿದೆ. ಒಂದೆಡೆ ಕಾಡಾನೆ ದಾಳಿಯಿಂದ ಮನುಷ್ಯರು ಮೃತಪಟ್ಟರೆ, ಮತ್ತೊಂದೆಡೆ ವಿದ್ಯುತ್ ಅವಘಡಗಳಿಂದ ಕಾಡಾನೆಗಳು ಸಾವು ಕಾಣುತ್ತಿವೆ.
ಜಮೀನಿನ ಕೆಲಸಕ್ಕೆ ತೆರಳಿದ ಶಿವಬಸಪ್ಪ ಆನೆಯ ದಾರುಣ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ.