ಚಿಕ್ಕಮಗಳೂರು | ಪರೀಕ್ಷೆಯಲ್ಲಿ ಅನುತ್ತೀರ್ಣದ ಭೀತಿ: ಬಾಲಕಿ ಆತ್ಮಹತ್ಯೆ
Update: 2025-03-20 22:47 IST

ಚಿಕ್ಕಮಗಳೂರು: ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಭೀತಿಯಿಂದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ಗ್ರಾಮದ ಬೋವಿ ಕಾಲನಿಯಲ್ಲಿವರದಿಯಾಗಿದೆ.
ವರ್ಷಿಣಿ (15) ಮೃತ ವಿದ್ಯಾರ್ಥಿನಿ.
ಈಕೆ ಕಡೂರು ತಾಲೂಕಿನ ಬಾಣಾವರ ಗ್ರಾಮದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದೊಂದು ವಾರದಿಂದ ಪರೀಕ್ಷೆ ಬರೆದು ಗುರುವಾರ ಕೊನೆಯ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ ಬಾಲಕಿ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿಲ್ಲ ಎಂದು ಮನೆಯವರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಳೆಂದು ತಿಳಿದು ಬಂದಿದೆ.
ಸಂಜೆ ವೇಳೆ ಮನೆಯ ಕೋಣೆ ಸೇರಿಕೊಂಡಿದ್ದ ಬಾಲಕಿ ಮನೆಯಲ್ಲಿ ಶುಂಠಿಗೆಂದು ತಂದಿಟ್ಟಿದ್ದ ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದು ಬಂದಿದೆ. ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.