ಖ್ಯಾತ ನಟ ಮೋಹನ್‌ ಲಾಲ್ ಆಸ್ಪತ್ರೆಗೆ ದಾಖಲು

Update: 2024-08-18 14:06 GMT

ಮೋಹನ್‌ಲಾಲ್ (Photo: Facebook)

ತಿರುವನಂತಪುರ: ವಿಪರೀತ ಜ್ವರ, ಉಸಿರಾಟದ ತೊದರೆ ಹಾಗೂ ಸ್ನಾಯುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖ್ಯಾತ ನಟ ಮೋಹನ್‌ಲಾಲ್ ರವಿವಾರ ಕೊಚ್ಚಿಯಲ್ಲಿ ಆಸ್ಪತ್ರೆಗೆ ದಾಖಲಾದರು.

64 ವರ್ಷ ವಯಸ್ಸಿನ ಮೋಹನ್‌ಲಾಲ್ ಅವರು ಶ್ವಾಸಕೋಶದ ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆಯೆಂದು ಅವರು ಚಿಕಿತ್ಸೆ ಪಡೆಯುತ್ತಿರುವ ಅಮೃತಾ ಆಸ್ಪತ್ರೆಯು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ತೀವ್ರ ವೈದ್ಯಕೀಯ ತಪಾಸಣೆಗೊಳಗಾದ ಬಳಿಕ ಮೋಹನ್ ಅವರು ಮನೆಗೆ ಹಿಂತಿರುಗಿದ್ದಾರೆ.

ಮುಂದಿನ ಐದು ದಿನಗಳವರೆಗೆ ಸಾರ್ವಜನಿಕರ ಒಡನಾಟದಿಂದ ದೂರವಿರುವಂತೆ ಹಾಗೂ ಸೂಚಿಸಲಾದ ಔಷಧಿ ಹಾಗೂ ಚಿಕಿತ್ಸೆಯನ್ನು ಅನುಸರಿಸುವಂತೆ ಮೋಹನ್‌ಲಾಲ್ ಅವರಿಗೆ ಸಲಹೆ ನೀಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದಾರೆ.

ʼಎಲ್‌2: ಎಂಪುರಾನ್ʼ ಚಿತ್ರದ ಚಿತ್ರೀಕರಣಕ್ಕಾಗಿ ಗುಜರಾತ್‌ಗೆ ತೆರಳಿದ್ದ ಮೋಹನ್ ಲಾಲ್ ಅವರ ದೇಹಪರಿಸ್ಥಿತಿ ಹದಗೆಟ್ಟಿತ್ತು. ಇಂದು ಕೊಚ್ಚಿಗೆ ಆಗಮಿಸಿದ ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News