ಗುರುಗ್ರಾಮ ಹಿಂಸಾಚಾರ ಕುರಿತ ಟ್ವೀಟ್‌ ತನ್ನದಲ್ಲ, ಖಾತೆ ಹ್ಯಾಕ್‌ ಮಾಡಲಾಗಿತ್ತು ಎಂದ ನಟ ಗೋವಿಂದ

Update: 2023-08-03 13:06 GMT

ನಟ ಗೋವಿಂದ (Photo: PTI)

ಹೊಸದಿಲ್ಲಿ: ಹರ್ಯಾಣ ಗಲಭೆ ಕುರಿತಂತೆ ಮಾಡಿದ ಪೋಸ್ಟ್‌ ನಂತರ ನಟ ಗೋವಿಂದ ತಮ್ಮ ಟ್ವಿಟರ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆನ್ನಲಾಗಿದೆ. ಗುರುವಾರ ಇನ್‌ಸ್ಟಾಗ್ರಾಂ ಪೋಸ್ಟ್‌ ಒಂದನ್ನು ಮಾಡಿದ ಗೋವಿಂದ ತಮ್ಮ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು ಎಂದಿದ್ದಾರೆ. ತಾನು ಯಾವುದೇ ಟ್ವೀಟ್‌ ಮಾಡಿಲ್ಲ, ತನ್ನ ತಂಡವೂ ಟ್ವೀಟ್‌ ಮಾಡಿಲ್ಲ ಎಂದು ಇನ್‌ಸ್ಟಾಗ್ರಾಂ ವೀಡಿಯೋ ಮೂಲಕ ಗೋವಿಂದ ಹೇಳಿದ್ದಾರೆ. ಸೈಬರ್‌ ಕ್ರೈಂ ಘಟಕಕ್ಕೆ ದೂರು ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ.

ಬುಧವಾರ @ಗೋವಿಂದಅಹುಜಾ21 ಎಂಬ ಖಾತೆಯಿಂದ ಗುರುಗ್ರಾಮ ಹಿಂಸಾಚಾರ ಕುರಿತು ಟ್ವೀಟ್‌ ಒಂದನ್ನು ಮಾಡಲಾಗಿತ್ತು. ಆದರೆ ತಾನು ಆ ಖಾತೆಯನ್ನು ಬಹಳ ಸಮಯದಿಂದ ಬಳಸಿಲ್ಲ ಎಂದು ಗೋವಿಂದ ಹೇಳಿದ್ದಾರಲ್ಲದೆ ಚುನಾವಣೆ ಸಮಯ ಹತ್ತಿರ ಬರುತ್ತಿರುವುದರಿಂದ ನಾನು ಒಂದು ಪಕ್ಷದ ಪರ ಕಣಕ್ಕಿಳಿಯಬಹುದೆಂದು ಕೆಲ ಜನರು ಅಂದುಕೊಂಡು ಈ ಟ್ವೀಟ್‌ ಮಾಡಿರಬಹುದು, ನಾನು ಟ್ವೀಟ್‌ ಮಾಡಿಲ್ಲ, ಇಂತಹ ವಿಷಯಗಳ ಬಗ್ಗೆ ಮಾತನಾಡುವುದೂ ಇಲ್ಲ,” ಎಂದು ಗೋವಿಂದ ಹೇಳಿದ್ದಾರೆ.

ಗುರುಗ್ರಾಮದಲ್ಲಿ ಮುಸ್ಲಿಮರ ಅಂಗಡಿಗಳ ಮೇಲಿನ ದಾಳಿ ಸಂಬಂಧಿತ ವೀಡಿಯೋವೊಂದಕ್ಕೆ ಉತ್ತರಿಸಿದ್ದ ಗೋವಿಂದ ಹೆಸರಿನ ಟ್ವಿಟರ್‌ ಖಾತೆಯು “ನಾವೆಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೆ. ತಮ್ಮನ್ನು ಹಿಂದುಗಳೆಂದು ಹೇಳಿಕೊಂಡು ನಂತರ ಇಂತಹ ಕೃತ್ಯಗಳನ್ನು ನಡೆಸುವವರಿಗೆ ನಾಚಿಕೆಯಾಗಬೇಕು. ಶಾಂತಿ ಕಾಪಾಡಿ, ನಮ್ಮದು ಡೆಮಾಕ್ರೆಸಿ, ಅಟಾಕ್ರೆಸಿ ಅಲ್ಲ,” ಎಂದು ಟ್ವೀಟ್‌ ಮಾಡಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News