‘ಹಾಲಿವುಡ್‍ಗೆ ಕಮಲ್ ಹಾಸನ್’: ಎ.ಆರ್. ರಹ್ಮಾನ್ ಹೇಳಿದ್ದೇನು?

Update: 2023-08-10 18:21 GMT

ಕಮಲ್ ಹಾಸನ್, ಎ. ಆರ್. ರಹ್ಮಾನ್ | Photo: PTI 

ಜುಲೈ ತಿಂಗಳಲ್ಲಿ ಎ. ಆರ್. ರಹ್ಮಾನ್ ಮತ್ತು ಕಮಲ್ ಹಾಸನ್ ಅವರು ಲಾಸ್ ಎಂಜಲೀಸ್‍ನಲ್ಲಿ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‍ಗೆ ಭೇಟಿ ನೀಡಿದ್ದರು. ಕಮಲ್‍ಹಾಸನ್ ಹಾಲಿವುಡ್ ಚಿತ್ರ ನಿರ್ಮಿಸಬೇಕಿತ್ತು ಎಂದು ಈ ಖ್ಯಾತ ನಟನಿಗೆ ಹೇಳಿದ್ದಾಗಿ ಎ. ಆರ್. ರಹ್ಮಾನ್ 'ದ ಹಿಂದೂ' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಸಣ್ಣ ಕೂಟವೊಂದರಲ್ಲಿ ‘Oppenheimer’ ಅನ್ನು ಜತೆಯಾಗಿ ವೀಕ್ಷಿಸಿದ್ದಾಗಿಯೂ ಅವರು ಹೇಳಿದ್ದಾರೆ.

"ಹಲವು ವರ್ಷಗಳ ಕಾಲ ಅವರು ಈ ಉದ್ಯಮದಲ್ಲಿ ಸಿಲುಕಿಕೊಂಡಿದ್ದಾರೆ ಎನಿಸಿತು. ಇದು ನಮ್ಮ ಪಾಲಿಗೆ ಒಳ್ಳೆಯದು. ಆದರೆ ಅವರಿಗೆ.. ನನಗೆ ತಿಳಿಯದು. 20 ವರ್ಷಗಳ ಹಿಂದೆ ಅವರ ಬಳಿ ಸಾಕಷ್ಟು ಹಣ ಇದ್ದಾಗ, ಹಾಲಿವುಡ್‍ಗೆ ಹೋಗಿ ಅಲ್ಲಿ ಒಂದು ಚಿತ್ರ ನಿರ್ಮಿಸಬೇಕಿತ್ತು. ಯಶಸ್ಸು ಅಥವಾ ವೈಫಲ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲ. ಈಗಲೂ ಅವರು ಅದನ್ನು ಮಾಡಬಹುದು. ನಾನು ಈಗಲೂ ಅವರಿಗೆ ಅದನ್ನೇ ಹೇಳುತ್ತೇನೆ. ಇಂಗ್ಲಿಷ್ ಚಿತ್ರ ಅದರ ಅಭಿವ್ಯಕ್ತಿಗಾಗಿಯೇ ವಿನಃ ಅದರ ವಿಮರ್ಶೆಗಾಗಿ ಅಲ್ಲ" ಎಂದು ರಹ್ಮಾನ್ ಸ್ಪಷ್ಟಪಡಿಸಿದರು.

"ನಾವು ಚೈನೀಸ್ ಥಿಯೇಟರ್‍ಗೆ ಭೇಟಿ ನೀಡಿ ಜತೆಯಾಗಿ ಓಪನ್‍ಹೈಮರ್ ವೀಕ್ಷಿಸಿದೆವು" ಎಂದೂ ಅವರು ಹೇಳಿಕೊಂಡಿದ್ದಾರೆ. ಅವರು ಆರು ತಲೆಮಾರುಗಳ ಚಿತ್ರನಿರ್ಮಾಪಕ ಕುಟುಂಬದಿಂದ ಬಂದವರು. ಅವರ ಜತೆ ಮಾತು ಹಾಗೂ ವರ್ಣನಾತ್ಮಕ ಕಥೆಗಳು ಸದಾ ಇಷ್ಟ. ಈಗಲೂ ಅವರು ಸಾಖಷಚ್ಟು ಚಿತ್ರಗಳನ್ನು ನೋಡುತ್ತಾರೆ. ಅವುಗಳ ಘಟನೆ ಮತ್ತು ಸಂಭಾಷಣೆ ನೆನಪಿಸಿಕೊಳ್ಳುತ್ತಾರೆ. ಸಣ್ಣ ಸಣ್ಣ ವಿಷಯಗಳನ್ನೂ ಹೇಳುತ್ತಾರೆ. ಆದರೆ ನನಗೆ ಅವರಂತೆ ಪ್ರತಿ ಚಿತ್ರವನ್ನು ಪೂರ್ತಿಯಾಗಿ ನೋಡುವ ತಾಳ್ಮೆ ಇಲ್ಲ" ಎಂದು ಸ್ಪಷ್ಟಪಡಿಸಿದರು.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News