ಮಲಯಾಳಂ ನಟ ಮೋಹನ್ ರಾಜ್ ನಿಧನ

Update: 2024-10-05 08:57 GMT

ಮಲಯಾಳಂ ನಟ ಮೋಹನ್ ರಾಜ್ (Photo: Facebook)

ತಿರುವನಂತಪುರಂ: ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ನಟ ಮೋಹನ್ ರಾಜ್ (69) ಅವರು ತಿರುವನಂತಪುರಂ ಬಳಿಯ ಕಂಜಿರಾಂಕುಳಂನ ತಮ್ಮ ಮನೆಯಲ್ಲಿ ಶುಕ್ರವಾರ ನಿಧನರಾದರು.

ಮಲಯಾಳಂ ಸೇರಿದಂತೆ ತೆಲುಗು, ತಮಿಳಿನ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋಹನ್ ರಾಜ್ ನಟಿಸಿದ್ದರು. ಖಳನಟರಾಗಿ ಅವರು ಹೆಚ್ಚು ಜನಪ್ರಿಯರಾಗಿದ್ದರು.

1955 ರಲ್ಲಿ ತಿರುವನಂತಪುರದಲ್ಲಿ ಜನಿಸಿದ್ದ ಮೋಹನ್ ರಾಜ್ ಸೇನೆಗೆ ಸೇರಿದ್ದರು. ಕೆಲ ವರ್ಷಗಳ ಬಳಿಕ ಗಾಯದಿಂದ ಸೇನೆ ತೊರೆದು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿಕೊಂಡು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.

2024 ರಲ್ಲಿ ಮುಮ್ಮುಟ್ಟಿ ಅಭಿನಯದ Rorschach ಸಿನಿಮಾ ಇವರು ಅಭಿನಯಿಸಿದ್ದ ಕೊನೆಯ ಸಿನಿಮಾವಾಗಿತ್ತು.

1989 ರಲ್ಲಿ ತೆರೆ ಕಂಡಿದ್ದ ಮೋಹನ್ ಲಾಲ್ ಅಭಿನಯದ ‘ಕಿರೀಡಂ’ ಮಲಯಾಳಂ ಸಿನಿಮಾದಲ್ಲಿ ‘ಕಿರಿಕಾದನ್ ಜೋಸ್’ ಹೆಸರಿನಲ್ಲಿ ಖಳನಟನಾಗಿ ಮಿಂಚಿದ್ದರು.‘ಕಿರೀಡಂ’ ಸಿನಿಮಾ ಕನ್ನಡಲ್ಲಿ ‘ಮೋಡದ ಮರೆಯಲ್ಲಿ’ ಎಂಬ ಹೆಸರಿನಿಂದ ರಿಮೇಕ್ ಆಗಿ 1991 ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ – ಯಮುನಾ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಮೋಹನ್ ರಾಜ್ ಅವರ ನಿಧನಕ್ಕೆ ಸಿ.ಎಂ ಪಿಣರಾಯಿ ವಿಜಯನ್, ನಟರಾದ ಮೋಹನ್ ಲಾಲ್, ಮುಮ್ಮುಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News