ಈ ಹೀರೊಗೆ 57 ವರ್ಷ..ಶಾರೂಕ್ ಗುಣಗಾನ ಮಾಡಿದ ಆನಂದ್ ಮಹೀಂದ್ರಾ

Update: 2023-08-03 07:44 GMT

ಶಾರೂಖ್ ಖಾನ್ / ಆನಂದ್ ಮಹೀಂದ್ರಾ (PTI)

ಹೊಸದಿಲ್ಲಿ: ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಅವರ 'ಜವಾನ್' ಚಿತ್ರದ 'ಝಿಂದಾ ಬಂದಾ'ದ ಹಾಡಿನಲ್ಲಿ ಶಾರೂಖ್ ರ ಅಪೂರ್ವ ಪ್ರದರ್ಶನವನ್ನು ಉದ್ಯಮಿ ಆನಂದ್ ಮಹೀಂದ್ರಾ ಗುಣಗಾನ ಮಾಡಿದ್ದಾರೆ. ಶಾರೂಖ್ ಇದಕ್ಕೆ ಸ್ಪಂದಿಸಿದ ರೀತಿ ಮತ್ತಷ್ಟು ಆಕರ್ಷಕ. ಹಾಡು ಬಿಡುಗಡೆಯಾದ ಮರುದಿನ ಆನಂದ್ ಮಹೀಂದ್ರಾ, ಎಸ್‍ಆರ್‍ಕೆ ಆಕರ್ಷಕ ಸಂಗೀತಕ್ಕೆ ಹೆಜ್ಜೆಹಾಕುವ ಈ ಚಿತ್ರಗೀತೆಯ ತುಣುಕು ಶೇರ್ ಮಾಡಿದ್ದಾರೆ. ಜತೆಗೆ "ಈ ಹೀರೊಗೆ ಕೇವಲ 57 ವರ್ಷ. ಅವರ ವಯಸ್ಸಾಗುವಿಕೆ ಪ್ರಕ್ರಿಯೆ ಗುರುತ್ವಾಕರ್ಷಣೆ ಶಕ್ತಿಯನ್ನೂ ಧಿಕ್ಕರಿಸುತ್ತದೆ! ಬಹಳಷ್ಟು ಮಂದಿಗಿಂತ 10 ಪಟ್ಟು ಸಕ್ರಿಯರು. #ಝಿಂಧಾಬಂದಾ ಹೋ ತೋ ಐಸಾ" ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಸ್ವತಃ ಶಾರೂಖ್ ಖಾನ್ ಅವರ ಗಮನ ಸೆಳೆದಿದೆ. ಅವರು ಇದಕ್ಕೆ ನೀಡಿರುವ ಪ್ರತಿಕ್ರಿಯೆ ಹೀಗಿದೆ: "ಮಾನ್ಯರೇ, ಜೀವನ ಅಷ್ಟು ಅಲ್ಪ ಮತ್ತು ವೇಗ... ಅದರ ಜತೆಗೆ ಹೋಗುವ ಪ್ರಯತ್ನ. ನಗು.. ಅಳು.. ಕಂಪನ ಅಥವಾ ಹಾರುವುದು.. ಇದು ಕೊಡುವ ಎಲ್ಲವನ್ನೂ ಪ್ರಯತ್ನಿಸುವ, ಆನಂದಿಸುವ ಪ್ರಯತ್ನ. ಬಹುಶಃ ತಾರೆಗಳ ಜತೆಗಿನ ಈಜು.. ಕೆಲ ಸಂತಸದ ಕ್ಷಣಗಳ ಕನಸು.." ಎಂದು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಜವಾನ್ ಚಿತ್ರ ನಿರ್ಮಾಪಕರು ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ಶಾರೂಖ್ ಖಾನ್ ಪೊಲೀಸ್ ಸಮವಸ್ತ್ರದಲ್ಲಿ ಇರುವ ತುಣುಕು ಇದೆ.


Tags:    

Writer - ವಾರ್ತಾಭಾರತಿ

contributor

Editor - Mushina

A staff reporter

Web Editor at VarthaBharati

Byline - ವಾರ್ತಾಭಾರತಿ

contributor

Similar News