ಬಜ್ಪೆ: ಆ.15ರಂದು ಹಾಜಿ ಬಿ.ಎಚ್. ಉಮ್ಮರಬ್ಬ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ
ಬಜ್ಪೆ: ಹಾಜಿ ಬಿ.ಎಚ್. ಉಮ್ಮರಬ್ಬ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನೆ ಮತ್ತು ಬಜ್ಪೆ ಝಾರ ಸೆಂಟರ್ ನಲ್ಲಿ ರೂಪುಗೊಂಡಿರುವ ಹವಾನಿಯಂತ್ರಿತ ಇಸ್ತಿರಾ ಬ್ಯಾಂಕ್ವೆಟ್ ಹಾಲ್ ನ ಶುಭಾರಂಭದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವು ಆ.15ರ ಬೆಳಗ್ಗೆ ಕಿನ್ನಿಪದವು ಗ್ಯಾಸ್ ಪಂಪ್ ಬಳಿ ನಡೆಯಲಿದೆ.
ಹಾಜಿ ಬಿ.ಎಚ್. ಉಮ್ಮರಬ್ಬ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನೆ ಮತ್ತು ಬಜ್ಪೆ ಝಾರ ಸೆಂಟರ್ ಶುಭಾರಂಭ ಕಾರ್ಯಕ್ರಮವು ಬೆಳಗ್ಗೆ 8.30ಕ್ಕೆ ಜರುಗಲಿದ್ದು, 9ಗಂಟೆಯಿಂದ ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಕಟೀಲು ಲೈಫ್ಲೈನ್ ಹೆಲ್ತ್ ಕೇರ್ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ, ಕಣ್ಣಿನ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವು ನಡೆಯಲಿದೆ.
ಶಿಬಿರದಲ್ಲಿ ನರರೋಗ ತಜ್ಞ ಡಾ. ರಕ್ಷಿತ್ ಕೆದಂಬಾಡಿ, ಸಾಮಾನ್ಯ ವೈದ್ಯರಾದ ಡಾ. ಶಿಹಾಬ್ ಹಸನ್, ಡಾ. ಆಲಂ ನವಾಝ್, ಮಕ್ಕಳ ತಜ್ಞ ವೈದ್ಯ ಡಾ. ಬಾಶಿತ್, ಮೂತ್ರಪಿಂಡ ತಜ್ಞ ಡಾ. ಅಶ್ವಿನ್, ಮೂಳೆ ತಜ್ಞರಾದ ಡಾ. ಕೆಲ್ವಿನ್ ಫೆರ್ನಾಂಡಿಸ್, ಡಾ. ಸಫ್ವಾನ್, ಕಣ್ಣಿನ ತಜ್ಞ ವೈದ್ಯ ಡಾ. ಕೀರ್ತನ್ ರಾವ್, ಸ್ತ್ರೀರೋಗ ತಜ್ಞರಾದ ಡಾ. ಜೆಸ್ಸಿ ಮರಿಯ ಡಿಸೋಜ, ಡಾ. ಆಯಿಶಾ ಸಫೂರ, ಚರ್ಮರೋಗ ತಜ್ಞೆ ಡಾ. ಆಶ್ಮಿಯಾ ಅಬ್ದುಲ್ ರಝಾಕ್, ಹೋಮಿಯೋಪತಿ ವೈದ್ಯರಾದ ಡಾ. ಆಯಿಶಾ ಫೈರೋಝ ಮೊದಲಾದ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ.