ಬೆಳ್ತಂಗಡಿ: ಗೆಳೆಯನ ಮೂಗು ಕಚ್ಚಿ ಕತ್ತರಿಸಿದ ಆರೋಪಿಯ ಬಂಧನ

Update: 2024-01-03 06:28 GMT

ಮೂಗು ಕತ್ತರಿಸಲ್ಪಟ್ಟು ಆಸ್ಪತ್ರೆಗೆ ದಾಖಲಾಗಿರುವ ದೀಕ್ಷಿತ್ 

ಬೆಳ್ತಂಗಡಿ, ಜ.3: ಹೊಸ ವರ್ಷದ ಆಚರಣೆಯ ಪಾರ್ಟಿಯಲ್ಲಿ ಸ್ನೇಹಿತನ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿ ನಂತರ ಕುಡಿದ ಮತ್ತಿನಲ್ಲಿ ಯುವಕನೋರ್ವನ ಮೂಗು ಕಚ್ಚಿ ತುಂಡರಿಸಿದ ಪ್ರಕರಣದ ಆರೋಪಿಯನ್ನು ವೇಣೂರು 'ಪೊಲೀಸರು ಬಂಧಿಸಿದ್ದಾರೆ.

ರಾಕೇಶ್ (21) ಬಂಧಿತ ಆರೋಪಿಯಾಗಿದ್ದಾನೆ.

ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ನಿವಾಸಿ ದೀಕ್ಷಿತ್ (28) ಎಂಬವರ ಮೂಗನ್ನು ಕಚ್ಚಿ ತುಂಡರಿಸಿದ ಪ್ರಕರಣದ ಆರೋಪಿಯಾಗಿರುವ ರಾಕೇಶ್ ಮೂಲತಃ ಮೂಡಿಗೆರೆ ತಾಲೂಕಿನವನಾಗಿದ್ದು, ಪ್ರಸಕ್ತ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಮಾರಿಗುಡಿ ಬಳಿಯ ಸಂಬಂಧಿಕರ ಮನೆಯಲ್ಲಿ ವಾಸವಿದ್ದನು. ಡಿಸೆಂಬರ್ 31ರಂದು ರಾತ್ರಿ ರಾಜೇಶ್ ಹೊಸ ವರ್ಚಾಚರಣೆ ಸಂದರ್ಭ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಸ್ನೇಹಿತನ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ದೀಕ್ಷಿತ್ ಮೂಗನ್ನು ರಾಜೇಶ್ ಕಚ್ಚಿ ತುಂಡರಿಸಿದ್ದಾನೆ ಎಂದು ದೂರಲಾಗಿದೆ. ಘಟನೆಯಿಂದ ಗಾಯಗೊಂಡ ದೀಕ್ಷಿತ್ ಮಂಗಳೂರು ವೆನ್ಸಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೇಣೂರು ಪೊಲೀಸ್ ಠಾಣೆಯಲ್ಲಿ ದೀಕ್ಷಿತ್ ನೀಡಿದ ದೂರಿನಂತೆ ಆರೋಪಿ ರಾಕೇಶ್ ವಿರುದ್ಧ ಐಪಿಸಿ 504, 341, 324 ಹಾಗೂ 506ರಡಿ ಪ್ರಕರಣ ದಾಖಲಾಗಿತ್ತು. ಇದೀಗ ವೇಣೂರು ಸಬ್ ಇನ್ ಸ್ಪೆಕ್ಟರ್ ಶ್ರೀಶೈಲಾ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News