ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆರವು
ಉಳ್ಳಾಲ: ಬಡಾ ಕುಟುಂಬವನ್ನು ಗುರುತಿಸಿದ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಅವರಿಗೆ ಟ್ರಸ್ಟ್ ವತಿಯಿಂದ ಹಾಸಿಗೆ, ರೇಷನ್, ನಗದು ನೀಡಿ ಸಹಾಯ ಮಾಡಿದೆ.
ಈ ಸಂದರ್ಭ ಮಾತನಾಡಿದ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಶಾಫಿ ಬಬ್ಬುಕಟ್ಟೆ ಅವರು, ಇಂತಹ ಕುಟುಂಬವನ್ನು ಗುರುತಿಸಿ ಅವರಿಗೆ ನೆರವು ನೀಡುವುದು ಬಂಧುತ್ವ ಚಾರಿಟೇಬಲ್ ಟ್ರಸ್ಟ್ ನ ಗುರಿಯಾಗಿದ್ದು, ಅದನ್ನು ನಾವು ಮಾಡುತ್ತೇವೆ. ನಮ್ಮದು ಕೇವಲ ಅಳಿಲು ಸೇವೆ.ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ನ ಗೌರವ ಅಧ್ಯಕ್ಷ ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮಾತನಾಡಿ, ಕಷ್ಟಪಟ್ಟು ಬದುಕು ಸಾಗಿಸುವ ಕುಟುಂಬಗಳ ಪೈಕಿ ಕೆಲವು ಅತಂತ್ರ ಸ್ಥಿತಿ ಯಲ್ಲಿ ಇರುತ್ತದೆ. ಬದುಕಿಗೆ ದಾರಿ ತೋಚದೆ ಕಂಗಾಲಾಗಿರುವ ಕುಟುಂಬಕ್ಕೆ ನೆರವಾಗಬೇಕು. ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಗೆ ಜಾತಿ ಧರ್ಮ ಇಲ್ಲ.ಕಷ್ಟದಲ್ಲಿದ್ದವರನ್ನು ಗುರುತಿಸಿ ನೆರವು ನೀಡುತ್ತಿದೆ ಎಂದು ಹೇಳಿದರು.
ಟ್ರಸ್ಟ್ ನ ಕೊಡುಗೆಗೆ ಶ್ಲಾಘನೀಯ ವ್ಯಕ್ತಪಡಿಸಿದ ಮನೆಯ ಯಜಮಾನಿ ಶಾಂತಿ ಡಿಸೋಜ ಅವರು,ಈ ಮನೆಯಲ್ಲಿ ನಾನು ಮತ್ತು ತಾಯಿ ನಮ್ಮ ಜತೆ ಇಬ್ಬರು ಮಕ್ಕಳು ಮಾತ್ರ ಇದ್ದೇವೆ. ನಮ್ಮ ಕುಟುಂಬಕ್ಕೆ ದುಡಿಯುವ ಕೈಗಳಿಲ್ಲ. ಬಾಡಿಗೆ ಕೊಠಡಿಯಲ್ಲಿ ಇದ್ದೇವೆ.ದಾನಿಗಳ ಸಹಾಯ ಬದುಕಿನ ಆಧಾರ.ನನಗೆ ದರ್ಗಾ ಅಧೀನ ಕಲ್ಲಾಪು ಶಾಲೆಯಲ್ಲಿ ಸಣ್ಣ ಕೆಲಸ ಇದೆ.ಅದರಲ್ಲಿ ಸಿಗುವ ದುಡ್ಡಿನಲ್ಲಿ ಎಲ್ಲವೂ ಆಗಬೇಕು ಎಂದು ನೋವು ತೋಡಿಕೊಂಡರು.
ಈ ಸಂದರ್ಭದಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಶಾಫಿ ಬಬ್ಬುಕಟ್ಟೆ, ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಮಹಿಳಾ ವಿಭಾಗದ ರಾಜ್ಯ ಸದಸ್ಯ ಹನ್ನತ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಝೋಯ ಶೇಖ್, ರಾಜ್ಯ ಕಾರ್ಯಕಾರಿ ಸದಸ್ಯ ಸ್ವರ್ಣಲತಾ,ಮುಸ್ತಾಕ್, ಬಂಧುತ್ವ ಜಿಲ್ಲಾ ಗೌರವ ಅಧ್ಯಕ್ಷ ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಟ್ರಸ್ಟಿ ಆಸೀಫ್ ಬಬ್ಬುಕಟ್ಫೆ, ಸದಸ್ಯ ರಾದ ಮುಸ್ತಫಾ, ಹಫೀಝ್ ಆಲಿ, ಮುಸ್ತಾಕ್ ಉಪಸ್ಥಿತರಿದ್ದರು.