ದೇರಳಕಟ್ಟೆ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

Update: 2024-08-19 04:32 GMT

ದೇರಳಕಟ್ಟೆ: ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಿವಿಧ ಪ್ರಕರಣಗಳ ಆರೋಪಿ ಅಶ್ರಫ್ ಯಾನೆ ಪೊಂಗ ಅಶ್ರಫ್ ಯಾನೆ ಡೈಮಂಡ್ ಅಶ್ರಫ್(31) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ತುಮಕೂರು ಸಮೀಪದ ದಾಬಸ್ ಪೇಟೆ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೊಣಾಜೆ ಪೊಲೀಸ್ ಠಾಣಾ ವಾರೆಂಟ್ ಆರೋಪಿ ಆಗಿದ್ದ ಈತ ಹರೇಕಳ ಗ್ರಾಮದ ಕಡೆಂಜತೋಟ ನಿವಾಸಿ ಆಗಿದ್ದು,ಈತನ ವಿರುದ್ದ ಕೊಣಾಜೆ ಠಾಣೆ, ಉಳ್ಳಾಲ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ಕೊಣಾಜೆ ಪೊಲೀಸ್ ಠಾಣಾ ಪ್ರಕರಣದಲ್ಲಿ ಈತನು ಸುಮಾರು 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್  ನಿರ್ದೇಶನದಂತೆ, ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತರುಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್  ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಧನ್ಯ ಎನ್ ನಾಯಕ್ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರವೀಂದ್ರ ಸಿ.ಎಂ, ಪೊಲೀಸ್ ಉಪ ನಿರೀಕ್ಷಕ ನಾಗರಾಜ್ ಎಸ್, ಸಿಬ್ಬಂದಿಗಳಾದ ಎಚ್.ಸಿ ಮಹಮ್ಮದ್ ಶರೀಫ್, ಪಿಸಿಗಳಾದ ಸುರೇಶ್, ಪ್ರಶಾಂತ್ ರವರ ತಂಡ ತುಮಕೂರು ಸಮೀಪದ ದಾಬಸ್ ಪೇಟೆ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News