ಮಂಗಳೂರಿನಲ್ಲಿ ನಡೆಯಲಿರುವ ʼಫಿಸಿಯೊಕಾನ್ 2023ʼ ಉದ್ಘಾಟಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Update: 2023-08-18 23:14 IST
ಮಂಗಳೂರಿನಲ್ಲಿ ನಡೆಯಲಿರುವ ʼಫಿಸಿಯೊಕಾನ್ 2023ʼ ಉದ್ಘಾಟಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
  • whatsapp icon

ಮಂಗಳೂರು: ಸೆಪ್ಟೆಂಬರ್ 8ರಂದು ನಡೆಯಲಿರುವ ಪ್ರತಿಷ್ಠಿತ ಫಿಸಿಯೊಕಾನ್ 2023 ವಿಚಾರ ಗೋಷ್ಠಿಯನ್ನು ರಾಜ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಮಂಗಳೂರಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಡೆಯಲಿದೆ.

ಯು.ಟಿ.ಇಫ್ತಿಕಾರ್ ನೇತೃತ್ವದ ಸಂಘಟನಾ ಸಮಿತಿಯು ಇತ್ತೀಚೆಗೆ ರಾಜ್ಯಪಾಲ ಗೆಹ್ಲೋಟ್ ಅವರನ್ನು ಭೇಟಿಯಾಗಿ ವಿಚಾರ ಗೋಷ್ಠಿಯಲ್ಲಿ ಉಪಸ್ಥಿತರಿರುವಂತೆ ಅವರಿಗೆ ಔಪಚಾರಿಕ ಆಮಂತ್ರಣ ನೀಡಿತು. ಈ ಆಮಂತ್ರಣವನ್ನು ಒಪ್ಪಿಕೊಂಡಿರುವ ರಾಜ್ಯಪಾಲರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ.

ಈ ಸಂಬಂಧ ಭಾರತೀಯ ಭೌತ ಚಿಕಿತ್ಸಕರ ಒಕ್ಕೂಟದ ಉಪಾಧ್ಯಕ್ಷ ಡಾ. ಎ. ಸುರೇಶ್ ಬಾಬು ರೆಡ್ಡಿ, ರಾಜೀವ್ ಗಾಂಧಿ ಆರೋಗ್ಯ ಸೇವೆ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಪ್ರೊ. ಸಾಯಿ ಕುಮಾರ್, ಪದ್ಮಶ್ರೀ ಭೌತ ಚಿಕಿತ್ಸೆ ಸಂಸ್ಥೆಯ ಪ್ರಾಂಶುಪಾಲ ಡಾ. ಪ್ರವೀಣ್ ಆ್ಯರನ್ ಹಾಗೂ ಬೆಂಗಳೂರು ಭೌತ ಚಿಕಿತ್ಸಕ ಜಾಲದ ಕಾರ್ಯದರ್ಶಿ ಡಾ. ಧನಂಜಯನ್ ಅವರೊನ್ನೊಳಗೊಂಡಿದ್ದ ಸಮಿತಿ ಸದಸ್ಯರ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News