ಮುಲ್ಕಿ: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಡ್ರೈನೇಜ್‌ನಲ್ಲಿ ಪತ್ತೆ

Update: 2023-07-19 13:38 GMT

ಮುಲ್ಕಿ: ಪಡುಪಣಂಬೂರು ಒಳ ಪೇಟೆಯ ಸಂತೆಕಟ್ಟೆ ಬಳಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಡ್ರೈನೇಜ್ ನಲ್ಲಿ ಮಹಿಳೆಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಪಡು ಪಣಂಬೂರು ಕಲ್ಲಾಪು ಬಳಿಯ ನಾಗಮ್ಮ ಶೆಟ್ಟಿಗಾರ್ (85) ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ಕಳೆದ ನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದು, ಬುಧವಾರ ಸಂತೆಕಟ್ಟೆ ನಿವಾಸಿ ಪುಷ್ಪರಾಜ್ ಅಮೀನ್ ರವರ ಡ್ರೈನೇಜ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪುಷ್ಪರಾಜ್ ಅಮೀನ್ ಮುಂಬೈನಲ್ಲಿ ವಾಸವಾಗಿದ್ದು, ಪಡುಪಣಂಬೂರಿನಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಪುಷ್ಪರಾಜ್ ಅಮೀನ್ ರವರು ಊರಿಗೆ ಬಂದಿದ್ದು ಬುಧವಾರ ಬೆಳಗ್ಗೆ ಮನೆಯವರು ಮನೆಯ ಹಿಂದುಗಡೆ ಇರುವ ಸಣ್ಣ ಡ್ರೈನೇಜ್ ನೋಡುವಾಗ ಮಹಿಳೆ ನಾಗಮ್ಮ ಶೆಟ್ಟಿಗಾರ ಶವ ಮಡಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರು ಮುಲ್ಕಿ ಪೊಲೀಸರಿಗೆ ತಿಳಿಸಿದ್ದಾರೆ.

ಡ್ರೈನೇಜ್ ಮೇಲೆ ತಗಡಿನ ಶೀಟ್ ಇಟ್ಟಿದ್ದು ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದರೂ ಸಣ್ಣ ಡ್ರೈನೇಜ್ ಪಿಟ್ ಒಳಗಡೆ ಮಹಿಳೆ ಬಿದ್ದಿರುವ ಬಗ್ಗೆ ಹಾಗೂ ಶವ ಪತ್ತೆಯಾದ ಸ್ಥಿತಿ ನೋಡಿದರೆ ಅನುಮಾನ ಉಂಟಾಗಿದೆ.ಮಹಿಳೆ ಡ್ರೈನೇಜ್ ಫಿಟ್ ಒಳಗಡೆ ಬಿದ್ದು ಕೆಲದಿನಗಳಾಗಿದ್ದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News