ರಜಬ್ ತಿಂಗಳು ಆರಂಭ

Update: 2025-01-01 13:32 GMT

ಮಂಗಳೂರು, ಜ.1: ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ (ಜ.1) ರಜಬ್ ತಿಂಗಳ ಪ್ರಥಮ ಚಂದ್ರದರ್ಶನದೊಂದಿಗೆ ರಜಬ್ ತಿಂಗಳಾರಂಭವಾಗಿದೆ.

ಗುರುವಾರ ರಜಬ್ ಚಾಂದ್ 1 ಆಗಿದ್ದು, ಜ.27ರಂದು ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಜಬ್ ಚಾಂದ್ 27 ಇಸ್ರಾಹ್-ಮಿಹ್ರಾಜ್ ರಾತ್ರಿಯಾಗಿರುತ್ತದೆ ಎಂದು ದ.ಕ. ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತಿಳಿಸಿರುವುದಾಗಿ ಮಸ್ಜಿದ್ ಝೀನತ್ ಭಕ್ಷ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News