ವಿಟ್ಲ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಮತ್ತೋರ್ವ ಸಂಘಪರಿವಾರದ ಕಾರ್ಯಕರ್ತ ಸೆರೆ

Update: 2023-08-01 16:47 GMT

ಅಕ್ಷಯ್ ದೇವಾಡಿಗ, ಕಮಲಾಕ್ಷ ಬೆಳ್ಚಾಡ, ಸುಕುಮಾರ ಬೆಳ್ಚಾಡ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಸಂಘಪರಿವಾರದ ಕಾರ್ಯಕರ್ತನನ್ನು ವಿಟ್ಲ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಕೇರಳ ಬಾಯಾರು ನಿವಾಸಿ ರಾಜ ಯಾನೆ ರಾಜೇಶ(26) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೊಂದ ಬಾಲಕಿ ಐದು ಮಂದಿಯ ಹೆಸರನ್ನು ದೂರಿನಲ್ಲಿ ತಿಳಿಸಿದ್ದು, ಮೂಡುಬಿದರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿ ಅಕ್ಷಯ್ ದೇವಾಡಿಗ (24), ಬಾಯಾರು ಗ್ರಾಮದ ಕೊಜಪ್ಪ ನಿವಾಸಿ ಕಮಲಾಕ್ಷ ಬೆಳ್ಚಾಡ (30), ಬೆರಿಪದವು ನಿವಾಸಿ ಸುಕುಮಾರ ಬೆಳ್ಚಾಡ (28) ಎಂಬವರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಸೋಮವಾರ ಪೆರುವಾಯಿ ನಿವಾಸಿ ಜಯಪ್ರಕಾಶ್ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೂರು ಮಂದಿಯನ್ನು ರವಿವಾರ ಬಂಧಿಸಿದ್ದು, ಓರ್ವನನ್ನು ಸೋಮವಾರ ಬಂಧಿಸಿದರೆ, ಇನ್ನೋರ್ವ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News