ಪೊಲೀಸರ ವಶದಲ್ಲಿದ್ದ ಯುವಕನ ಸಾವು ಪ್ರಕರಣ | ತನಿಖೆ ಸಿಐಡಿಗೆ ಹಸ್ತಾಂತರ : ದಾವಣಗೆರೆ ಎಸ್ಪಿ ಮಾಹಿತಿ

Update: 2024-05-26 10:40 GMT

ಚೆನ್ನಗಿರಿ ಪೊಲೀಸ್‌ ಠಾಣೆ ಮುಂಭಾಗ ನೆರೆದಿರುವ ಜನರು

ದಾವಣಗೆರೆ : ಪೊಲೀಸರ ವಶದಲ್ಲಿದ್ದ ಯುವಕನ ಸಾವು ವಿಚಾರ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ 25 ಮಂದಿ ಅರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಇಷ್ಟರಲ್ಲಿಯೇ ಸಿಐಡಿ ಅಧಿಕಾರಿಗಳು ಪ್ರಕರಣವನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಲಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ‌ಪ್ರಶಾಂತ್‌ ಮಾಹಿತಿ ನೀಡಿದ್ದಾರೆ.

ಬಂಧಿತರ ಮೇಲೆ ಐಪಿಸಿ ಕಲಂ 353 ಹಾಗೂ 307 ಅನ್ವಯ ಪ್ರಕರಣ ದಾಖಲು‌ ಮಾಡಲಾಗಿದೆ‌. ಈಗಾಗಲೇ   ನ್ಯಾಯಾಧೀಶರ ಸಮ್ಮುಖದಲ್ಲಿ ಮೃತ ಅದಿಲ್‌ ರ ಮರಣೋತ್ತರ ಪರೀಕ್ಷೆ ಆಗಿದೆ. ಇನ್ನು ಮೂರು ದಿನಗಳಲ್ಲಿ ವೈದ್ಯಕೀಯ ವರದಿ ಬರಲಿದ್ದು, ಅಂತಿಮ ವರದಿ ಬಂದ ಮೇಲೆ ಸತ್ಯಾಂಶ ತಿಳಿಯಲಿದೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ,  ಸಿಬ್ಬಂದಿಗಳನ್ನು ನಿಯೋಜಿಸಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಚನ್ನಗಿರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಧಾರ್ಮಿಕ ನಿಂದನೆ,  ವ್ಯಕ್ತಿ ನಿಂದನೆ ಪೋಸ್ಟ್ ಗಳು , ಪ್ರಚೋದನಾಕರಿ ಹೇಳಿಕೆಗಳು, ಪೋಸ್ಟ್ ಗಳು, ವಿಡಿಯೋ ಹಾಗೂ ಪೋಟೋಗಳನ್ನು ಶೇರ್ ಮಾಡಬಾರದು. ಪೋಸ್ಟ್ ಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News