ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರ ನೇತೃತ್ವದಲ್ಲಿ ಸಭೆ ಮಾಡುತ್ತೇವೆ : ರೇಣುಕಾಚಾರ್ಯ

Update: 2025-02-25 23:52 IST
ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರ ನೇತೃತ್ವದಲ್ಲಿ ಸಭೆ ಮಾಡುತ್ತೇವೆ : ರೇಣುಕಾಚಾರ್ಯ
  • whatsapp icon

ದಾವಣಗೆರೆ : ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗಬೇಕು. ಅದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡುತ್ತೇವೆ. ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರ ನೇತೃತ್ವದಲ್ಲಿ ದೊಡ್ಡ ಮಟ್ಟದ ಸಭೆ ಮಾಡುತ್ತೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಮಂಗಳವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕೆಲವರು ಯಡಿಯೂರಪ್ಪ ಅವರಿಗೆ ವೀರಶೈವ ಲಿಂಗಾಯತರ ಬೆಂಬಲ ಇಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ನಾವು ಮಠಾಧೀಶರರೊಂದಿಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಸಭೆ ಮಾಡಿ ಮಠಾಧೀಶರ ಬೆಂಬಲ ಪಡೆದು, ಬಿಎಸ್‌ವೈ, ವಿಜಯೇಂದ್ರ ಪರ ಸಂಪೂರ್ಣ ಸಮಾಜ ಜೊತೆಗಿರುವಂತೆ ನೋಡಿಕೊಳ್ಳುತ್ತೇವೆʼ ಎಂದು ಹೇಳಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕ. ಹಿಂದೆ ಸಿಎಂ ಆಗಲು ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರರೂ ಸೇರಿದಂತೆ ಎಲ್ಲರೂ ಬೆಂಬಲ ಕೊಟ್ಟಿದ್ದರು. ಇನ್ನು ಮುಂದೆಯೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಲವರು ಸ್ವಯಂಘೋಷಿತ ನಾಯಕರು. ನಾನು ವೀರಶೈವ ಲಿಂಗಾಯತ, ಉತ್ತರ ಕರ್ನಾಟಕ ಮಂದಿ ಎನ್ನುತ್ತಾರೆ. ಯಾದು ಯಾವುದೂ ಇಲ್ಲ. ಇವೆಲ್ಲ ಮುಖವಾಡಗಳು, ನೀವೆಲ್ಲ ತಿರಸ್ಕೃತ ನಾಣ್ಯಗಳು ಎಂದು ಯತ್ನಾಳ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News