ರಾಜ್ಯ ಸರಕಾರ ರಾಮಭಕ್ತರನ್ನು ಬೆದರಿಸುವ ಕೆಲಸ ಮಾಡುತ್ತಿದೆ: ಆರ್ ಆಶೋಕ್

Update: 2024-01-03 17:33 GMT

ದಾವಣಗೆರೆ: ರಾಜ್ಯ ಸರಕಾರ ರಾಮಭಕ್ತರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಎಂದು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆಯಾಗಲು ಕೆಲವೇ ದಿನ ಉಳಿದಿದೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರ ರಾಮಭಕ್ತರನ್ನು ಹೆದರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೇಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಎಲ್ಲಾ ಸರ್ವೇಗಳಲ್ಲಿ ಮತ್ತೆ ದೇಶದಲ್ಲಿ ಮೋದಿ ಅವರೇ ಪ್ರಧಾನಿಯಾಗುತ್ತಾರೆ ಎಂದು ಹೇಳಿವೆ. ಈ ಹಿನ್ನಲೆಯಲ್ಲಿ ಕರಸೇವಕರ ಮೇಲೆ ಪ್ರಕರಣ ದಾಖಲಿಸಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಂದಾಗ ಕಾಂಗ್ರೆಸ್ ರಾಮ ಬಗ್ಗೆ ಮಾತನಾಡಿದ್ದರು. ರಾಮಾಯಣವೇ ಇಲ್ಲ ರಾಮ ಕೇವಲ ಕಲ್ಪನೆ ಎಂದು ಹೇಳಿದ್ದರು. ಕಾಂಗ್ರೆಸ್‍ನವರಿಗೆ ರಾಮಮಂದಿರ ಇಷ್ಟವಿಲ್ಲ. ಅಲ್ಲಿ ಬಾಬರಿ ಮಸೀದಿ ಇರಬೇಕಿತ್ತು. ಅದ್ದರಿಂದ ಹುಬ್ಬಳಿಯಲ್ಲಿ 31 ವರ್ಷದ ನಂತರ ಕರಸೇವಕರ ಮೇಲೆ ಕೇಸ್ ಹಾಕಿ ಬಂಧಿಸಿದ್ದಾರೆ. ಕರ ಸೇವಕರ ಮೇಲೆ ಹಾಕಿದ ಕೇಸ್ ಗಳಿಗೆ ಸಾಕ್ಷಿ ಇಲ್ಲ ಎಂದರು.

ಆಟೋ ಓಡಿಸಿಕೊಂಡಿ ಅಲ್ಲೇ ಓಡಾಡುತ್ತಿದ್ದವರು ತಲೆಮರೆಸಿಕೊಂಡಿದ್ದಾರೆ ಹೇಳುತ್ತಾರೆ. ಆಟೋ ಓಡಿಸಿಕೊಂಡು ಇದ್ದವನು ಪೋಲಿಸರ ಕಣ್ಣಿಗೆ ಕಾಣಲಿಲ್ವ. ಪಿಎಫ್‍ಐ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸ್ ವಾಪಾಸ್ಸು ಪಡೆದರು ಎಂದು ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಹಿಂದೂ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ಕಾರ್ಯಕರ್ತರ ಜೊತೆ ನಾವು ಇದ್ದೇವೆ. ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ. ದೇಶದೆಲ್ಲಡೆ ರಾಮ ಮಂದಿರದ ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅದರೆ, ರಾಜ್ಯ ಸರಕಾರ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News