ಬಿ.ಎನ್.ಹರೀಶ್ ಬೋಳಾರ್

Update: 2024-06-18 15:05 GMT

ಮಂಗಳೂರು, ಜೂ.18: ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಬೋಳೂರಿನ ಶ್ರೀಮಹಮ್ಮಾಯಿ ದೇವಸ್ಥಾನದ ಪಾರಂಪರಿಕ ಅರ್ಚಕ ಬಿ.ಎನ್.ಹರೀಶ್ ಬೋಳೂರು (81) ಅವರು ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಲೇಖಕರಾಗಿದ್ದ ಹರೀಶ್ ಬೋಳಾರ್ ಉಡುಪಿಯಲ್ಲಿ ತುಳುಕೂಟದ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು. ನೇಕಾರಿಕೆಯ ಕುಲಕಸುಬಿನಲ್ಲಿ ಪರಿಣಿತರಾಗಿದ್ದ ಅವರು ಮಂಗಳೂರಿನ ನವಭಾರತ ಪತ್ರಿಕಾಲಯದಲ್ಲಿ ಬಳಿಕ ಮಣಿಪಾಲದ ಉದಯವಾಣಿಯಲ್ಲಿ ಸುದೀರ್ಘ ಕಾಲ ಉದ್ಯೋಗದಲ್ಲಿದ್ದರು.

‘ಮಗ್ಗದ ಮದಣ’ ಎಂಬ ಕಿರುಕತೆಗಳ ಸಂಕಲನವನ್ನು ಪ್ರಕಟಿಸಿದ್ದ ಅವರು ಉಡುಪಿಯಲ್ಲಿ ತುಳು ಸಂಘಟನೆಯ ಸ್ಥಾಪನೆಗೆ ಪ್ರಧಾನ ಕಾರಣಕರ್ತರಲ್ಲಿ ಒಬ್ಬರಾಗಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟದಲ್ಲೂ ಅವರು ಸದಸ್ಯ, ಪದಾಧಿಕಾರಿಯಾಗಿದ್ದರು.

ಜಿಲ್ಲಾ ಪದ್ಮಶಾಲಿ ಮಹಾಸಭಾದ ಹಿರಿಯ ಸದಸ್ಯರಾಗಿದ್ದ ಹರೀಶ್ ಬೋಳಾರ್, ಧಾರ್ಮಿಕ ವೇದಿಕೆಯ ಸಂಚಾಲಕರಾಗಿ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ, ಮಂಗಳೂರು ಶ್ರೀವೀರಭದ್ರ ಮಹಮ್ಮಾಯಿ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಮೀದ್ ಹಾಜಿ
ಭೋಜ ಪೂಜಾರಿ
ಡಾ. ಆಶಾ ಭಟ್