ಶಮೀರ್
Update: 2024-06-28 14:52 GMT
ಮಂಗಳೂರು, ಜೂ.28: ನಗರ ಹೊರವಲಯದ ಫರಂಗಿಪೇಟೆಯ ಪ್ರಸಕ್ತ ಅಡ್ಯಾರ್ ಕಣ್ಣೂರು ನಿವಾಸಿ ಶಮೀರ್ ಯಾನೆ ಸಮ್ಮಿ (46) ಗುರುವಾರ ರಾತ್ರಿ ನಿಧನರಾದರು.
ಪತ್ನಿ ಹಾಗೂ ಮೂವರು ಪುತ್ರರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಬಂದರ್ ದಕ್ಕೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದರು.
*ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿ.ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ರಿಯಾಝ್ ಹರೇಕಳ, ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಲತೀಫ್ ಕುಂಡಾಲ ಸಂತಾಪ ವ್ಯಕ್ತಪಡಿಸಿದ್ದಾರೆ.