ಪ್ರಹ್ಲಾದ್ ಜೋಶಿಯು ಕೆಲ ಮಠಾಧೀಶರನ್ನು ಬೆದರಿಸಿ ನನ್ನ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ : ದಿಂಗಾಲೇಶ್ವರ ಸ್ವಾಮೀಜಿ

Update: 2024-04-09 13:12 GMT

ದಾವಣಗೆರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೆಲ ಮಠಾಧೀಶರನ್ನು ಹೆದರಿಸಿ ಬೆದರಿಸಿ ನನ್ನ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕುಮ್ಮಕ್ಕಿನಿಂದ ಕೆಲ ಮಠಾಧೀಶರು ನನ್ನ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಇದು ನಿಲ್ಲದೇ ಹೋದರೆ ಅದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಾಜ, ರಾಜಕೀಯ ಹೊರತುಪಡಿಸಿ ಇಲ್ಲ, ಸಮಾಜ ಸೇವೆಗೆ ಅವಕಾಶ ಸಿಕ್ಕಿದೆ, ಅದನ್ನು ಭಕ್ತರು ವಹಿಸಿದ್ದಾರೆ, ನಾವು ನಿಭಾಯಿಸುತ್ತೇವೆ ಅಷ್ಟೇ. ಆದರೆ, ಲಿಂಗಾಯತ ಸಮಾಜದ ಸ್ವಾಮೀಜಿಗಳನ್ನು, ನಾಯಕರನ್ನು, ಮುಖಂಡರ ಬಗ್ಗೆ ಜೋಶಿಯವರು ಅಪಪ್ರಚಾರ ಮಾಡುವುದನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಲಿಂಗಾಯತ ನಾಯಕರನ್ನು ತುಳಿಯುವ ಕೆಲಸ ಜೋಶಿ ಮಾಡಿದ್ದಾರೆ. ಕೇವಲ ಲಿಂಗಾಯತರಲ್ಲ ಬ್ರಾಹ್ಮಣರು ಸೇರಿ ಆ ಭಾಗದ ಎಲ್ಲ ಸಮಾಜದವರು ನನ್ನ ರಾಜಕೀಯ ಪ್ರವೇಶ ಸ್ವಾಗತಿಸಿದ್ದಾರೆ. ನಾನು ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಬಂಡಾಯ ಅಲ್ಲವೇ ಅಲ್ಲ. ಎರಡು ಪಕ್ಷದ ಭಕ್ತರು ನಮಗೆ ಸ್ವಾಗತ ಮಾಡಿದ್ದಾರೆ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News