ದುಬೈ : ಸಿಓಪಿ 28 ಸಭೆಯಲ್ಲಿ ಮಣಿಪುರದ ಬಾಲಕಿಯ ಪಳೆಯುಳಿಕೆ ವಿರೋಧಿ ಪ್ರತಿಭಟನೆ

Update: 2023-12-12 18:15 GMT

Photo : twitter/LicypriyaK

ದುಬೈ: ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಪರಿಸರ ಸಮಾವೇಶ 2023 (ಸಿಓಪಿ28)ದಲ್ಲಿ ಭಾರತದ ಮಣಿಪುರ ರಾಜ್ಯದ 12 ವರ್ಷದ ಬಾಲಕಿ, ಪರಿಹಾರ ಹೋರಾಟಗಾರ್ತಿ ಲಿಸಿಪ್ರಿಯಾ ಲಿಸಿಪ್ರಿಯಾ ಕಾಂಗುಜಾಮ್ ಹಠಾತ್ತನೆ ವೇದಿಕೆಗೆ ಧಾವಿಸಿ ಬಂದು ಪಳೆಯುಳಿಕೆ ಇಂಧನ ವಿರೋಧಿ ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ. ‘‘ಪಳೆಯುಳಿಕೆ ಇಂಧನವನ್ನು ಕೊನೆಗೊಳಿಸಿ, ನಮ್ಮ ಭೂಮಿ ಹಾಗೂ ಭವಿಷ್ಯವನ್ನು ರಕ್ಷಿಸಿ’’ ಎಂಬ ಬರೆಯಲಾಗಿದ್ದ ಫಲಕವನ್ನು ಹಿಡಿದು ಆಕೆ ವೇದಿಕೆಯನ್ನೇರಿದ್ದಳು.

ವೇದಿಕೆಯನ್ನೇರಿದ ಕೂಡಲೇ ಕಾಂಗುಜಾಮ್ ಪಳೆಯುಳಿಕೆ ಇಂಧನಗಳ ಬಳಕೆಯ ವಿರುದ್ಧ ಕಿರುಭಾಷಣವನ್ನು ಮಾಡಿದ್ದಳು. ಅಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಯಿತು. ಆನಂತರ ಆಕೆಯನ್ನು ಹೊರಗೆ ಕೊಂಡೊಯ್ಯಲಾಯಿತು.

ಆನಂತರ ಸಿಓಪಿ28 ಸಮಾವೇಶದ ನಿರ್ದೇಶಕ-ಮಹಾ ರಾಯಭಾರಿ ಮಜೀದ್ ಅಲ್ ಸುವೈದಿ ಅವರು ಹೇಳಿಕೆಯೊಂದನ್ನು ನೀಡಿ ಪರಿಸರ ಸಂರಕ್ಷಣೆ ಬಗ್ಗೆ ಬಾಲಕಿ ಕಾಂಗುಜಾಮ್ಳ ಕಾಳಜಿಯನ್ನು ತಾನು ಪ್ರಶಂಸಿಸುವುದಾಗಿ ತಿಳಿಸಿದರು ಹಾಗೂ ಆಕೆಗೆ ಮತ್ತೊಮ್ಮೆ ಮೆಚ್ಚುಗೆಯ ಕರತಾಡನ ಮಾಡುವಂತೆ ನೆರೆದಿದ್ದ ಸಭಿಕರಿಗೆ ಕರೆ ನೀಡಿರು.

ನಂತರ ಕಾಂಗುಜಾಮ್ , ಸಾಮಾಜಿಕ ಮಾಧ್ಯಮ x ನ್ಲಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಪ್ರತಿಭಟನೆಯ 30 ನಿಮಿಷಗಳವರೆಗೆ ನನ್ನನ್ನು ಬಂಧಿಸಿಟ್ಟಿದ್ದರು. ಪಳೆಯುಳಿಕೆ ಇಂಧನಗಳಿಂದ ಭೂಮಿಯನ್ನು ರಕ್ಷಿಸುವಂತೆ ಕೋರಿದ್ದುದೇ ನಾನು ಎಸಗಿದ ಏಕೈಕ ಅಪರಾಧವಾಗಿದೆ. ಈಗ ಅವರು ನಮ್ಮನ್ನು ಸಿಓಪಿ 28 ಸಮಾವೇಶದಿಂದ ಹೊರದಬ್ಬಿದ್ದಾರೆ ಎಂದು ತಿಳಿಸಿದ್ದಾಳೆ.

X ನಲ್ಲಿ ಮಾಡಿದ ಇನ್ನೊಂದು ಪೋಸ್ಟ್ನಲ್ಲಿ ಕಾಂಗುಜಾಮ್, ಪಳೆಯುಳಿಕೆ ಇಂಧನಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ನನ್ನ ಬ್ಯಾಜ್ ಅನ್ನು ಮುಟ್ಟುಗೋಲು ಹಾಕಿದ್ದಕ್ಕೆ ಏನು ಕಾರಣ? ನೀವು ನಿಜಕ್ಕೂ ಪಳೆಯುವಳಿಕೆ ಇಂಧನಗಳ ವಿರುದ್ಧ ನಿಜಕ್ಕೂ ವಿರೋಧವಿದ್ದಲ್ಲಿ ನನ್ನನ್ನು ನೀವು ಬೆಂಬಲಿಸಬೇಕಿತ್ತು ಹಾಗೂ ತಕ್ಷಣವೇ ಬ್ಯಾಜ್ ಅನ್ನು ಹಿಂತಿರುಗಿಸಬೇಕಕಿತ್ತು’’ ಎಂದು ಹೇಳಿದ್ದಾರೆ.

ಸಿಓಪಿ28 ಸಮಾವೇಶದಲ್ಲಿ 190 ರಾಷ್ಟ್ರಗಳ 60 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು. 12 ವರ್ಷದ ಲಿಸಿಪ್ರಿಯಾ ಕಾಂಗುಜಾಂ ಅವರು ಆಗ್ನೇಯ ಏಶ್ಯದ ರಾಷ್ಟ್ರವಾದ ತೈಮೊರ್ ಲೆಸ್ಟೆಯ ವಿಶೇಷ ಪ್ರತಿನಿಧಿಯಾಗಿ ಸಮಾವೇಶಕ್ಕೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News