ಸೌದಿ ಅರೇಬಿಯಾ| ಜುಬೈಲ್ ನಲ್ಲಿ ದಾರುಲ್ ಹಸನಿಯಾ ಪ್ರಚಾರ ಸಭೆ

Update: 2024-10-26 16:23 GMT

ಜುಬೈಲ್: ದಾರುಲ್ ಹಸನಿಯಾ ಅಕಾಡೆಮಿ ಜುಬೈಲ್ ಘಟಕ ವತಿಯಿಂದ ಪ್ರಚಾರ ಸಭೆ ಕುಕ್ಝೋನ್ ನಲ್ಲಿ ನಡೆಯಿತು.

ಸಮಾರಂಭವನ್ನು ಸಯ್ಯದ್ ಕೆ.ಎಸ್. ಅಲೀ ತಂಙಲ್ ಕುಂಬೋಳ್ ಉದ್ಘಾಟಿಸಿ, ಶಿಕ್ಷಣಕ್ಕೆ ಪವಿತ್ರ ಕುರ್‌ಆನ್ ಮಹತ್ತರವಾದ ಸ್ಥಾನವನ್ನು ನೀಡಿದ್ದು, ಪ್ರವಾದಿಯವರಿಗೆ ಅವತೀರ್ಣಗೊಂಡ ಕುರ್‌ಆನಿನ ಮೊದಲ ಅಧ್ಯಾಯ ʼಓದಿರಿʼ ಎಂದಾಗಿದೆ, ಆದ್ದರಿಂದ ಸುಶಿಕ್ಷಿತ ಸಮಾಜ ಕಟ್ಟುವಲ್ಲಿ ಎಲ್ಲರೂ ಪರಸ್ಪರ ಕೈಜೋಡಿಸಬೇಕೆಂದು ಕರೆ ನೀಡಿದರು‌.

ಶೈಖುನಾ ಬೊಳ್ಳೊರು ಉಸ್ತಾದ್ ದುಆ ನೆರವೇರಿಸಿ ಮಾತನಾಡಿ, ಪವಿತ್ರ ಕುರ್‌ಆನ್ ಕಲಿಯುವವರು ಮತ್ತು ಕಲಿಸುವವರ ಕುರಿತು ಪ್ರವಾದಿಯವರು ಅತ್ಯಂತ ಶ್ರೇಷ್ಠರೆಂದು ಬಣ್ಣಿಸಿದ್ದು, ಕುರ್‌ಆನಿನ ಸಂದೇಶವನ್ನು ಕಲಿತು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕೆಂದು ಹೇಳಿದರು.

ಮುಝೈನ್ ಕಂಪನಿ ಮಾಲಕರು, ಉದ್ಯಮಿ ಝಕರಿಯಾ ಜೊಕಟ್ಟೆ ಪ್ರಸ್ತಾವಿಕವಾಗಿ ಮಾತನಾಡಿ, ದೀನಿ ಸಂಸ್ಥೆಗಳಿಗೆ ನೆರವಾಗುವುದು ಪಾರತ್ರಿಕಾ ಲೋಕದ ವಿಜಯದ ಧ್ಯೇಯದೊಂದಿಗೆ ಮಾತ್ರವಾಗಿದ್ದು, ಈ ನಿಟ್ಟಿನಲ್ಲಿ ದಾರುಲ್ ಹಸನಿಯಾ ಸಂಸ್ಥೆಯನ್ನು ಪುತ್ತೂರಿನಲ್ಲಿ ಬಲಿಷ್ಠವಾಗಿ ಕಟ್ಟುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದ ಅವರು ಜುಬೈಲ್ ನಲ್ಲಿ ಉದ್ಯಮಿಯಾಗಿದ್ದ ಮರ್ಹೂಂ ಹಾರಿಸ್ ಹಾಜಿ ದರ್ಬೆ ಅವರು ಈ ಸಂಸ್ಥೆಯನ್ನು ಬಲಿಷ್ಠವಾಗಿ ಕಟ್ಟುವ ಕನಸನ್ನು ಹೊಂದಿದ್ದರು ಅದರೆ ವಿಧಿಯ ತೀರ್ಮಾನ ಬೇರೆಯಾಗಿತ್ತು ಅವರು ನಮ್ಮಿಂದ ಅಗಲಿದ್ದಾರೆ, ನಾವೆಲ್ಲರೂ ಅವರ ಕನಸು ನನಸಾಗಿಸುವ ಕೆಲಸ ಮಾಡಬೇಕೆಂದರು.

ದಾರುಲ್ ಹಸನಿಯಾ ಜುಬೈಲ್ ಘಟಕ ಅಧ್ಯಕ್ಷ ಫೈರೂಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ದಾರುಲ್ ಹಸನಿಯಾ ಅಕಾಡೆಮಿ ವಕ್ತಾರ ಕೆಎಂಪಿ ಅನ್ವರ್ ಸ್ವಾದಿಕ್ ಮೌಲವಿ ಮೊಟ್ಟೆತ್ತಡ್ಕ ಸಂಸ್ಥೆಯ ಬಗ್ಗೆ ಪರಿಚಯಿಸಿದರು.

ಸಯ್ಯದ್ ಶಮೀಂ ತಂಙಲ್ ಕುಂಬೋಳ್, ದಾರುಲ್ ಹಸನಿಯಾ ಮುಖ್ಯ ಸಲಹೆಗಾರ ಫಾರೂಕ್ ಹಾಜಿ ಪೋರ್ಟುವೇ‌, ದಾರುಲ್ ಹಸನಿಯಾ ದಮಾಮ್ ಘಟಕ ಗೌರವಾಧ್ಯಕ್ಷ ಹಾಜಿ ಅಮ್ಜದ್ ಖಾನ್ ಪೋಲ್ಯ, ಸಾಲ್ಮರ ಮಸೀದಿ ಅಧ್ಯಕ್ಷ ಹಮೀದ್ ಸಾಲ್ಮರ, ಡಿಕೆಸಿ ಅಧ್ಯಕ್ಷ ರಫೀಕ್ ಸೂರಿಂಜೆ, ಎಸ್ಐಸಿ ಕಾರ್ಯದರ್ಶಿ ಸಯ್ಯದ್ ಅಹ್ಮದ್ ತಂಙಳ್‌, ಎಸ್ಐಸಿ ಕರ್ನಾಟಕ ಉಪಾಧ್ಯಕ್ಷ ರಾಫಿ ಹುದವಿ, ಬುರೈದಾ ಘಟಕ ದಾರುಲ್ ಹಸನಿಯಾ ಅಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಹಮೀದ್ ಹಾಜಿ ಅರೆಮೆಕ್ಸ್ ಆಶಂಸ ಭಾಷಣ ಮಾಡಿದರು.


ಬಷೀರ್ ಹಾಜಿ ದರ್ಬೆ, ಉದ್ಯಮಿ ತ್ವಾಹಿರ್ ಸಾಲ್ಮರ, ದಾರುಲ್ ಹಸನಿಯಾ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ‌, ದಾರುಲ್ ಹಸನಿಯಾ ಜುಬೈಲ್ ಗೌರವಾಧ್ಯಕ್ಷ ಮುನೀರ್ ಹಾಜಿ ಬೈರಿಕಟ್ಟೆ, ದಾರುಲ್ ಹಸನಿಯಾ ಉಪಾಧ್ಯಕ್ಷ ತಹ್ ಸೀರ್ ದರ್ಬೆ, ಅನ್ಸಾಪ್ ಜುಬೈಲ್, ನಿಝಾಂ ಆರೆಂಡ, ಆರಿಸ್ ಹಾಜಿ ಆರೆಂಡ, ಲತೀಫ್ ಮರಕ್ಕನಿ‌, ಇಸ್ಮಾಹಿಲ್ ಹಾಜಿ ಕೂರ್ನಡ್ಕ, ದಾರುಲ್ ಹಸನಿಯಾ ದಮಾಮ್ ಅಧ್ಯಕ್ಷ ನೌಶಾದ್ ಪೋಲ್ಯ, ಸಲೀಂ ಕೂರ್ನಡ್ಕ, ಹುಸೈನ್ ಹಾಜಿ ಕೋಡಿಯಾಡಿ, ಸುಹೈಲ್ ಕೋಡಿಯಾಡಿ, ಅಶ್ರಫ್ ಚೀಕಲ ಮುಕ್ವೆ‌, ಝುಬೈರ್ ಸಕಲೇಶಪುರ, ಪಹ್ ದ್ ದರ್ಬೆ, ಉದೈಫ್ ಕೊರಿಂಗಿಲ‌, ರಹಿಮಾನ್ ಮುಲ್ಲರಪಟ್ಣ, ಇಕ್ಬಾಲ್ ಜೊಕಟ್ಟೆ, ಸಿರಾಜ್ ಜೊಕಟ್ಟೆ, ಆರಿಫ್ ಜೋಕಟ್ಟೆ‌, ಖಾಲಿದ್ ಸಾಲ್ಮರ, ಸಾಬಿರ್ ಎಲ್ ಟಿ ಚಿಕ್ಕಪುತ್ತೂರು, ಜಶೀಂ ಮುಡಿಪು, ಶಫೀಕ್ ಮಲಪ್ಪುರಂ, ಸುಲೈಮಾನ್ ಖಾಸಿಮಿ ಬಾಯಾರ್, ರಝಾಕ್ ಫೈಝಿ ಬಾಂಬಿಲ, ಇಕ್ಬಾಲ್ ಕುಂತೂರು, ಶರಪು ಕುದ್ಲೂರು, ರಪೀಕ್ ಆರೆಂಡ, ಶುಹಾಗ್ ಮಂಗಳೂರು, ಶೌಕತ್ತಾಲಿ ವೆಲೆನ್ಸಿಯಾ, ಸಪಾಝ್ ಕಾಸರಗೋಡು, ಸಿದ್ದೀಕ್ ದೇಲಂಪಾಡಿ, ಸತ್ತಾರ್ ಕುಂಜೂರು, ಝುಹೈರ್ ಸೋಂಕಾಲ್, ಮುಹಾಝ್ ಸೋಂಕಾಲ್, ಅಥಾವುಲ್ಲ ಕೂರ್ನಡ್ಕ, ನೌಫಲ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.

ಆಶಿಕ್ ಬಾಖವಿ ಕಿರಾಅತ್ ಪಠಿಸಿದರು. ಜುಬೈಲ್ ಘಟಕದ ಪ್ರಧಾನ ಕಾರ್ಯದರ್ಶಿ ನಿಝಾರ್ ಸಾಮೆತ್ತಡ್ಕ ಸ್ವಾಗತಿಸಿದರು, ಮುಶ್ತಾಕ್ ಕೋಡಿಯಾಡಿ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News