ಫೆ.15: ದಮ್ಮಾಮ್ - ಮಲೆನಾಡು ಗಲ್ಫ್ ಟ್ರಸ್ಟ್ ವತಿಯಿಂದ ʼಮಲೆನಾಡ ಸಂಗಮ - 2024ʼ

Update: 2024-02-14 14:48 GMT

ದಮ್ಮಾಮ್: ಮಲೆನಾಡು ಗಲ್ಫ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ದಮ್ಮಾಮ್ - ಖೋಬಾರ್ ಘಟಕದ ವತಿಯಿಂದ ʼಮಲೆನಾಡ ಸಂಗಮ -2024ʼ  ದಮ್ಮಾಮ್ - ಜುಬೈಲ್ ಹೈವೇ ಸಮೀಪದಲ್ಲಿರುವ ಸೈಹಾತಿನ ದಿಲ್ಮೂನ್ ರೆಸಾರ್ಟ್‌ ನಲ್ಲಿ ಫೆ.15ರಂದು ರಾತ್ರಿ 7ರಿಂದ ನಡೆಯಲಿದೆ.

ಈ ಕಾರ್ಯಕ್ರಮದ ಅಂಗವಾಗಿ ಕ್ವಿಝ್ ಸ್ಪರ್ಧೆ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ ಹಾಗೂ ಇನ್ನಿತರ ವಿಶಿಷ್ಟ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಝಕರಿಯಾ ಹಾಜಿ ಅಲ್ ಮೋಜಯ್ನ್, ಇಬ್ರಾಹಿಂ ಹುಸೇನ್ ರಕ್ವಾನಿ ಗ್ರೂಪ್, ಅಬೂಬಕ್ಕರ್ ಹಾಜಿ ರೈಸ್ಕೋ, ಕಮರುದ್ದೀನ್ ಗೂಡಿನಬಳಿ, ಅಬ್ದುಲ್ ಅಝೀಝ್ ಫಹದ್ ಅಲ್ ತಮಿಮಿ ಲಾ ಫರ್ಮ್, ಶಕೀಲ್ ಅಹ್ಮದ್ ಮಖಾವಿ, ಮೊಹಮ್ಮದ್ ಸೀದಿ ಹಾಜಿ ಬಹರೈನ್, ಎಂ.ಜಿ.ಟಿ ಕೇಂದ್ರ ಮತ್ತು ಎಲ್ಲಾ ಝೋನಲ್‌ ಗಳ ಪದಾಧಿಕಾರಿಗಳು ಮತ್ತು ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಆಕರ್ಷಣೆಯಾಗಿ ಮಲೆನಾಡ ವಿಶೇಷ ಚಿಕ್ಕಮಗಳೂರು ಮಟ್ಟನ್ ಬಿರಿಯಾನಿಯನ್ನು ಶೆಫ್ ಜಬಿವುಲ್ಲಾ ಅವರು ತಯಾರಿಸಲಿದ್ದಾರೆ.

ದಮ್ಮಾಮ್‌ನ ತಕ್ವಾ ಮೆಡಿಕಲ್ ಸೆಂಟರ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಫ್ಲೂ ವ್ಯಾಕ್ಸಿನೇಷನ್ ಅನ್ನು ಒದಗಿಸಲಿದ್ದು, ಕಾರ್ಯಕ್ರಮಕ್ಕೆ ಎಲ್ಲರನ್ನೂ ವಿಶೇಷವಾಗಿ ಆಹ್ವಾನಿಸಲಾಗಿದೆ.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News