ಅಜ್ಮಾನ್: ಬಿಸಿಎಫ್, ತುಂಬೆ ಮೆಡಿಸಿಟಿ ಸಹಭಾಗಿತ್ವದಲ್ಲಿ ಬಿಸಿಎಫ್ ಸ್ಪೋರ್ಟ್ಸ್ ಫೆಸ್ಟಿವಲ್- 2023
ಯುಎಇ, ಡಿ.21: ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಮತ್ತು ತುಂಬೆ ಮೆಡಿಸಿಟಿ ಸಹಭಾಗಿತ್ವದಲ್ಲಿ 'ಬಿಸಿಎಫ್ ಸ್ಪೋರ್ಟ್ಸ್ ಫೆಸ್ಟಿವಲ್- 2023' ಇತ್ತೀಚೆಗೆ ಅಜ್ಮಾನ್ ನಲ್ಲಿರುವ ತುಂಬೆ ಮೆಡಿಸಿಟಿಯ ಕ್ರೀಡಾಂಗಣದಲ್ಲಿ ಜರುಗಿತು.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಮತ್ತು ತುಂಬೆ ಮೆಡಿಸಿಟಿಯ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್ ಮುಂದಾಳುತ್ವದಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಥ್ರೋ ಬಾಲ್, ಕಬಡ್ಡಿ, ರಿಲೇ, ಟೆನಿಸ್, ಟಗ್ ಆಫ್ ವಾರ್, ಟೇಬಲ್ ಟೆನಿಸ್ ಸಹಿತ ಅನೇಕ ಸ್ಪರ್ಧೆಗಳನ್ನು ಮತ್ತು ಮಕ್ಕಳಿಗೆ ವಿಶೇಷವಾದ ಹಲವಾರು ಆಟೋಟಗಳನ್ನು ಏರ್ಪಡಿಸಲಾಗಿತ್ತು.
ಮಹಿಳೆಯರ ಪಾಕ ಸ್ಪರ್ಧೆ(COOKERY COMPITITION)ಯು ವಿಶೇಷ ಆಕರ್ಷಣೆಯಾಗಿತ್ತು. ಸುಮಾರು 100ಕ್ಕೂ ಅಧಿಕ ವೈವಿಧ್ಯಮಯ ಆಹಾರಗಳು, ಬ್ಯಾರಿ ವಿಶೇಷ ಹಾಗೂ ಕರ್ನಾಟಕದ ವಿವಿಧ ಸ್ವಾದದ ಮತ್ತು ಆಯಾಮಗಳ ತಿಂಡಿ ತಿನಸುಗಳ ಸ್ವಾದಿಷ್ಟ ಖಾದ್ಯಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಪ್ರಧಾನ ಪ್ರಾಯೋಜಕ ಗಡಿಯಾರ ಗ್ರೂಪ್ ಆಫ್ ಕಂಪನೀಸ್ ಮಾಲಕ ಇಬ್ರಾಹೀಂ ಗಡಿಯಾರ್, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ತುಂಬೆ ಮೆಡಿಸಿಟಿ ರೂವಾರಿ ಫರ್ಹಾದ್, ವಿವಿಧ ಸಮಾಜ ಸೇವಾ ಸಂಸ್ಥೆಗಳ ಮುಂದಾಳುಗಳಾದ ಉಸ್ತಾದ್ ಇಬ್ರಾಹೀಂ ಕೆದಂಬಾಡಿ ಮತ್ತು ಸಹಚರರು, ಸಜಿಪ ಅಬ್ದುಲ್ ರಹಿಮಾನ್, ಸರ್ವೋತ್ತಮ ಶೆಟ್ಟಿ, ಸತೀಶ ಪೂಜಾರಿ, ಶಶಿಧರ ನಾಗರಾಜಪ್ಪ, ಗಣೇಶ್ ರೈ, ಝೈನುದ್ದೀನ್ ಬೆಳ್ಳಾರೆ, ಬಾಲ ಸಾಲ್ಯಾನ್, ರಫೀಕ್ ತೆಕ್ಕಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇವೇಳೆ ಸಾಮಾಜಿಕ ಕಳಕಳಿ ಮತ್ತು ಸೇವಾ ಕಾರ್ಯವನ್ನು ಪರಿಗಣಿಸಿ ಇಬ್ರಾಹೀಂ ಗಡಿಯಾರ ಅವರಿಗೆ 'ಬಿಸಿನೆಸ್ ಮ್ಯಾನ್ ಆಫ್ ದಿ ಇಯರ್ ಅವಾರ್ಡ್' ನೀಡಿ ಸನ್ಮಾನಿಸಲಾಯಿತು.
ಕರೀಯತ್ ಅಲ್ ಶಮ್ಸ್ ಕಾಂಟ್ರಾಕ್ಟಿಂಗ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ರಫ್ ಮಾಂತೂರ್, ಮೆರಿಟ್ ಫ್ರೈಟ್ ಸಿಸ್ಟಮ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಜೋಸೆಫ್ ಮಥಿಯಾಸ್ ಮತ್ತು ನಫೀಸ್ ಗ್ರೂಪ್ ಕಂಪೆನೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಅಬು ಸಲಿಚ್ ಅವರನ್ನು ಅವರ ಅನುಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಜೆಕೆ ಟೈರ್ ಕಾರ್ ರೇಸ್ ಚಾಂಪಿಯನ್ ಪರೀಕ್ಷಿತ್ ರನ್ನು ಇದೇವೇಳೆ ವಿಶೇಷವಾಗಿ ಸನ್ಮಾನಿಸಲಾಯಿತು.
ಪುಮುಖ ಪಂದ್ಯಾವಳಿಗಳಲ್ಲಿ ವಿಜೇತ ತಂಡಗಳ ವಿವರ
ಕ್ರಿಕೆಟ್: ನಫೀಸ್ ಗ್ರೂಪ್
ಫುಟ್ಬಾಲ್: ಯು.ಎಂ. ಬ್ರದರ್ಸ್
ವಾಲಿಬಾಲ್: ಪಾರ್ಕರ್ ಗ್ಲೋಬ್ ಶಿಪ್ಪಿಂಗ್
ಕಬಡ್ಡಿ: ನವಯುಗ ಕುಕ್ಕಾಜೆ
ಸಮಾರೋಪ:
ಸಂಜೆ ನಡೆದ ಸಮಾರೋಪ, ಪ್ರಶಸ್ತಿ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಮಾತನಾಡಿ, ಬಿಸಿಎಫ್ ಧ್ಯೇಯೋದ್ದೇಶ ಮತ್ತು ಸಾಧನೆಗಳ ಬಗ್ಗೆ ವಿವರಣೆ ನೀಡಿದರು.
ಗಡಿಯಾರ ಗ್ರೂಪ್ ಆಫ್ ಕಂಪನೀಸ್ ಮಾಲಕ ಇಬ್ರಾಹೀಂ ಗಡಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಬಿಸಿಎಫ್ ಸ್ಪೋರ್ಟ್ಸ್ ಫೆಸ್ಟಿವಲ್-23 ಅಧ್ಯಕ್ಷ ಅಶ್ರಫ್ ಸತ್ತಿಕಲ್ ಕ್ರೀಡಾಕೂಟದ ವಿವರಣೆ ನೀಡು ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದರು. ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು ಬಿಸಿಎಫ್ ನಡೆದು ಬಂದ ದಾರಿಯನ್ನು ವಿವರಿಸುತ್ತಾ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಉಪಾಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ ಬಿಸಿಎಫ್ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದರು.
ಬಿಸಿಎಫ್ ಉಪಾಧ್ಯಕ್ಷರಾದ ಅಮೀರುದ್ದೀನ್ ಎಸ್.ಐ. ಮತ್ತು ಅಫಿಕ್ ಹುಸೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣೇಶ್ ರೈ ಮಾತನಾಡಿ ಬಿಸಿಎಫ್ ನ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಸ್ವಾಗತಿಸಿದರು. ರಫೀಕ್ ಸತ್ತಿಕಲ್ ವಂದಿಸಿದರು.
ಬಿಸಿಎಫ್ ಸ್ಪೋರ್ಟ್ಸ್ ಫೆಸ್ಟಿವಲ್-2023 ಇದರ ಅಧ್ಯಕ್ಷ ಅಶ್ರಫ್ ಸತ್ತಿಕಲ್, ಅಫಿಕ್ ಹುಸೈನ್, ಅಸ್ಲಂ ಕಾರಾಜೆ, ಯಾಕೂಬ್ ದೀವಾ, ಅಬ್ದುರ್ರಹ್ಮಾನ್ ಸಜಿಪ, ಅಮೀರ್ ಹಳೆಯಂಗಡಿ, ಲತೀಫ್ ತಿಂಗಳಾಡಿ, ಇಕ್ಬಾಲ್ ಮೇಫ, ನವಾಝ್ ಕೋಟೆಕಾರ್, ನಿಯಾಝ್, ಯೂಸುಫ್ ಬ್ರಹ್ಮಾವರ, ರಫೀಕ್ ಪುತ್ತಾಕ, ಬಿಸಿಎಫ್ ಉಪಾಧ್ಯಕ್ಷರು, ಪದಾಧಿಕಾರಿಗಳು, ಬಿಸಿಎಫ್ ಮಹಿಳಾ ಘಟಕದ ನಾಯಕಿ ಮುಮ್ತಾಝ್ ಕಾಪು ಮತ್ತು ಮಹಿಳಾ ತಂಡ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದರು.
ತುಂಬೆ ಮೆಡಿಸಿಟಿ, ಗಡಿಯಾರ ಗ್ರೂಪ್, ಮುಖ್ಯ ಪ್ರಾಯೋಜಕರಾಗಿ ನಫೀಸ್ ಗ್ರೂಪ್, ಮೆರಿಟ್ ಫ್ರೈಟ್ ಸಿಸ್ಟಮ್ಸ್, ಕರೀಯತ್ ಅಲ್ ಶಮ್ಸ್ ಕಾಂಟ್ರಾಕ್ಟಿಂಗ್, ಸಹ ಪ್ರಾಯೋಜಕರಾಗಿ ರೋಮಾನ ವಾಟರ್, ಬಾಬ್ ಅಲ್ ಹನಾ ಜ್ಯಾಸ್ ಕಂಪನಿ, ಯುಎಇ ಮೊದಲಾದ ಸಂಸ್ಥೆಗಳು ಸಹಕರಿಸಿದವು.
ಕ್ರೀಡಾಕೂಟದಲ್ಲಿ ಅನಿವಾಸಿ ಕನ್ನಡಿಗರು, ಮಹಿಳೆಯರು, ಮಕ್ಕಳು, ಕ್ರೀಡಾಪಟುಗಳು, ಕ್ರೀಡಾ ಪ್ರೇಮಿಗಳು, ಹಲವಾರು ಕನ್ನಡ ಪರ ಸಮಾಜ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.